ಮೈಸೂರು,ನ,22,2019(www.justkannada.in): ಮೈಸೂರಿಗೆ ನಿಗದಿಯಾಗಿದ್ದ ಚಿತ್ರನಗರಿ ಬೆಂಗಳೂರಿಗೆ ಶಿಫ್ಟ್ ಆಗ್ತಿದ್ದು ಮೈಸೂರು ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗುತ್ತಿದೆ, ಈ ಕ್ರಮ ಕೈಬಿಡಬೇಕೆಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ ಒತ್ತಾಯಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಾರಾಯಣ್ ಗೌಡ, ಮೈಸೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಂದಲು ಈ ಹಿಂದೆ ಚಿತ್ರನಗರಿಯನ್ನು ಹಿಮ್ಮಾವಿನಲ್ಲಿ ಸುಮಾರು 100 ಎಕರೆ ಜಾಗದಲ್ಲಿ ನಿರ್ಮಾಣ ಯೋಜನೆಯನ್ನು ಎರಡು ವರ್ಷದ ಹಿಂದೆ ಬಜೆಟ್ ನಲ್ಲಿ ಮಂಡನೆಯಾಗಿತ್ತು. ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಸುಮಾರು ಎರಡು ವರ್ಷ ಕಳೆದರೂ ಯಾವುದೇ ಬೆಳವಣಿಗೆಯಾಗದೇ ಏಕಾಏಕಿ ಚಿತ್ರನಗರಿಯನ್ನ ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು
ಫಿಲ್ಮಂ ಸಿಟಿ ಬೆಂಗಳೂರಿಗೆ ಸ್ಥಳಾಂತರವಾಗುವುದೆಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಮೈಸೂರು ಪ್ರವಾಸೋದ್ಯಮವನ್ನೇ ನಂಬಿಕೊಂಡು 7 ಲಕ್ಷ ಜನರು ಬದುಕುತ್ತಿದ್ದಾರೆ. ಮೈಸೂರಿನ ಸಾಕಷ್ಟು ಅಭಿವೃದ್ಧಿ ಯೋಜನೆ ಬೇರೆಡೆಗೆ ಸ್ಥಳಾಂತರಿಸುತ್ತಿರುವುದು ಬೇಸರದ ಸಂಗತಿ.ಈ ಕ್ರಮವನ್ನು ಕೈ ಬಿಡಬೇಕೆಂದು ಹೋಟೆಲ್ ಮಾಲೀಕರ ಸಂಘ ಒತ್ತಾಯಿಸುತ್ತದೆ ನಾರಾಯಣ್ ಗೌಡ ತಿಳಿಸಿದರು.
Key words: film city- shift – Mysore -Bangalore -Hotel Owners Association- President – Narayan Gowda-Opposition