ಬೆಂಗಳೂರು,ಜುಲೈ,17,2024 (www.justkannada.in): ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ತಲೆಮರಿಸಿಕೊಂಡಿದ್ದ ಸಿನಿಮಾ ನಿರ್ದೇಶಕನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಗಜೇಂದ್ರ ಅಲಿಯಾಸ್ ಗಜ ಬಂಧಿತ ಸಿನಿಮಾ ನಿರ್ದೇಶಕ. 2004ರಲ್ಲಿ ಬೆಂಗಳೂರಿನ ವಿಲ್ಸನ್ ಗಾರ್ಡನ್ನಲ್ಲಿ ರೌಡಿ ಶೀಟರ್ ಕೊತ್ತರವಿ ಕೊಲೆಯಾಗಿತ್ತು. ಈ ಕೊಲೆ ಕೇಸ್ನಲ್ಲಿ ನಿರ್ದೇಶಕ ಗಜೇಂದ್ರ 8 ಆರೋಪಿಯಾಗಿದ್ದ. ಕೊಲೆ ಕೇಸ್ ನಲ್ಲಿ ಬಂಧಿತನಾಗಿದ್ದ ಗಜೇಂದ್ರಗೆ ಕೋರ್ಟ್ 1 ವರ್ಷ ಶಿಕ್ಷೆ ಕೂಡ ವಿಧಿಸಿತ್ತು. ಒಂದು ವರ್ಷ ಜೈಲುವಾಸ ನಂತರ ಗಜೇಂದ್ರ ಜಾಮೀನು ಪಡೆದು ಹೊರಬಂದಿದ್ದ.
ಜಾಮೀನು ಪಡೆದ ಬಳಿಕ ಗಜೇಂದ್ರ ಕೋರ್ಟ್ ಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. ಇದೀಗ ಗಜೇಂದ್ರನನ್ನ ಸಿಸಿಬಿ ಪೊಲೀಸರು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಈ ಹಿಂದೆ ಗಜೇಂದ್ರ ಪುಟಾಣಿ ಪವರ್ ಹಾಗೂ ರುದ್ರ ಎಂಬ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದನು.
Key words: film director, murder case, arrest