ಮೈಸೂರು,ಸೆಪ್ಟಂಬರ್,16,2021(www.justkannada.in): ಮೈಸೂರಿನಲ್ಲಿ ಅನಧಿಕೃತ ದೇವಾಲಯ ತೆರವು ಕಾರ್ಯಚರಣೆಯನ್ನ ಸದ್ಯಕ್ಕೆ ನಿಲ್ಲಿಸಿದ್ದೇವೆ. ಕ್ಯಾಬಿನೆಟ್ ನಲ್ಲಿ ತೆರವು ಕಾರ್ಯಚರಣೆ ಬಗ್ಗೆ ಚರ್ಚೆ ಮಾಡಿ ಅಂತಿಮ ಆದೇಶ ಮಾಡುತ್ತೇವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಸದ್ಯಕ್ಕೆ ಯಾವ ದೇವಾಲಯವೂ ತೆರವು ಕಾರ್ಯಚರಣೆ ಇಲ್ಲ. ಮಹದೇವಮ್ಮ ದೇವಸ್ಥಾನ ತೆರವು ಕಾರ್ಯಚರಣೆ ಹೇಗಾಯ್ತು, ಎಲ್ಲಿ ಲೋಪ ಇದೆ ಅನ್ನೋದನ್ನ ಅಧಿಕಾರಿಗಳ ವಿವರಣೆ ಕೇಳಿದ್ದೇವೆ. ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ಸಹಜವಾದದ್ದು. ದೇವಸ್ತಾನ ತೆರವು ಮಾಡಿದ್ದ ಕಾರಣ ಅವ್ರಿಗೆ ನೋವಾಗಿದೆ. ಅವರ ಪ್ರತಿಭಟನೆ ತಪ್ಪಲ್ಲ. ಇದರಿಂದ ಸರ್ಕಾರಕ್ಕೆ ಯಾವ ಮುಜುಗರವೂ ಇಲ್ಲ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಸಂಪ್ರದಾಯದಂತೆ ಗಜಪಡೆಗೆ ಸ್ವಾಗತ ಕಾರ್ಯಕ್ರಮ ಮಾಡಿದ್ದೇವೆ. ಅಕ್ಟೋಬರ್ 7 ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಆಗಲಿದೆ. ದಸರಾ ಉದ್ಘಾಟಕರು ಯಾರು ಎಂಬುದು ಇನ್ನು ತೀರ್ಮಾನ ಆಗಿಲ್ಲ. ಅಧಿವೇಶನ ಮುಗಿದ ಮೇಲೆ ಈ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ. ಸದ್ಯಕ್ಕೆ ಯಾವ ಪಟ್ಟಿ ಅಥವಾ ಶಾರ್ಟ್ ಲಿಸ್ಟ್ ತಯಾರು ಮಾಡಿಲ್ಲ. ಎಲ್ಲರ ಸಲಹೆಯನ್ನು ಪಡೆದು ಉದ್ಘಾಟಕರನ್ನ ಹೆಸರನ್ನು ಸಲಹೆ ಅಂತ ನೀಡಲಾಗುವುದು ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
Key words: Final -order – discuss -Cabinet -clearance – temple-Minister-mysore- ST Somashekhar.