SSLC ಪರೀಕ್ಷೆಗೆ ಅಂತಿಮ ಸಿದ್ಧತೆ: ಫೆ.27ರಿಂದ ವಿದ್ಯಾರ್ಥಿಗಳಿಗೆ ಆಕಾಶವಾಣಿ ಮೂಲಕ ವಿಷಯ ತಜ್ಞರಿಂದ ಕ್ಲಾಸ್.

ಬೆಂಗಳೂರು,ಫೆಬ್ರವರಿ,9,2023(www.justkannada.in): SSLC ಪರೀಕ್ಷೆಗೆ ವಿದ್ಯಾರ್ಥಿಗಳು ಕೊನೆಯಹಂತದಲ್ಲಿ ಸಿದ್ದತೆ ಮಾಡಿಕೊಳ್ಳಲು ಪೆಬ್ರವರಿ 27 ರಿಂದ ಮಾರ್ಚ್23 ರ ವರೆಗೆ ಆಕಾಶವಾಣಿಯ ಮುಖಾಂತರ ವಿಷಯ ತಜ್ಞರಿಂದ ತರಗತಿಗಳು ನಡೆಯಲಿದ್ದು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಲು ಕೋರಿದೆ.

ಪೆಬ್ರವರಿ 27 ರಿಂದ ಮಾರ್ಚ್23 ರ ವರೆಗೆ ಸೋಮವಾರದಿಂದ ಗುರುವಾರದ ವರೆಗೆ ಮಧ್ಯಾಹ್ನ 2.35 ರಿಂದ 3 ಗಂಟೆವರೆಗೆ ರಾಜ್ಯದ ಎಲ್ಲಾ ಬಾನುಲಿ ಕೇಂದ್ರಗಳಿಂದ ಪ್ರಸಾರವಾಗಲಿದೆ.

ವೇಳಾಪಟ್ಟಿ ಹೀಗಿದೆ.

27-02-23 ಕನ್ನಡ ಪ್ರಥಮಭಾಷೆ.

28-02-23- ಇಂಗ್ಲಿಷ್ ದ್ವಿತೀಯ ಭಾಷೆ.

01-03-23–ವಿಜ್ನಾನ (ಭೌತಶಾಸ್ತ್ರ. ರಸಾಯನಶಾಸ್ತ್ರ).

02-03-23 ವಿಜ್ನಾನ

(ಜೀವ ಶಾಸ್ರ).

06-03-23 ಗಣಿತ (ಅಂಕಗಣಿತ.ಬೀಜಗಣಿತ).

07-03-23 ಗಣಿತ (ರೇಖಾಗಣಿತ).

08-03-23 ಸಮಾಜ ವಿಜ್ಞಾನ (ಇತಿಹಾಸ.ರಾಜ್ಯಶಾಸ್ತ್ರ).

09-03-23 ಸಮಾಜ ವಿಜ್ನಾನ

(ಭೂಗೋಳ ಅರ್ಥಶಾಸ್ತ್ರ)

13-03-23 ಹಿಂದಿ ತ್ರತೀಯ ಭಾಷೆ

14-03-23 ಸಂಸ್ಕೃತ ಪ್ರಥಮಬಾಷೆ.

15-03-23 ಇಂಗ್ಲಿಷ್ ಪ್ರಥಮ ಭಾಷೆ..

16-03-23 ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕರಾದ ಹೆಚ್ ಎನ್ ಗೋಪಾಲಕೃಷ್ಣ ಅವರಿಂದ ಮಾಹಿತಿ.

20-03-23 ಮಕ್ಕಳು ಪರೀಕ್ಷೆ ಬರೆಯುವಕ್ರಮ.

21-03-23 ಪರೀಕ್ಷಾ ಸಮಯದಲ್ಲಿ ಆಹಾರ ಮತ್ತು ಆರೋಗ್ಯ ಹೇಗಿರಬೇಕು.

23-03-23 ಉರ್ದು ಪ್ರಥಮ ಭಾಷೆ ‌

ಈ ಕಾರ್ಯಕ್ರಮ ಸರಣಿಯನ್ನು ಪ್ರಸಾರ ಸಮಯದಲ್ಲಿ all India radio Bangalore YouTube .live ನಲ್ಲೂ.prasar bharatus news on air App ನಲ್ಲೂ ಕೇಳಬಹುದು.ಪ್ರಸಾರ ನಂತರ allindiaradio Bangalore YouTube ನ SSLC 2023 pariksha siddathe playlist ನಲ್ಲಿ ಲಭ್ಯವಾಗುತ್ತದೆ.

Key words: Final-Preparation-SSLC-Exam-Aakashvani- students