ಮುಂಬೈ:ಮೇ-21:(www.justkannada.in) ದೇಶಾದ್ಯಂತ ಚುನಾವಣೋತ್ತರ ಸಮೀಕ್ಷೆಯ ಬಗ್ಗೆ ಭಾರೀ ಚರ್ಚೆ ನಡೆಯುತ್ತಿರುವಾಗಲೇ ಮತದಾನೋತ್ತರ ಸಮೀಕ್ಷೆಯನ್ನು ಐಶ್ವರ್ಯ ರೈ ಬಚ್ಚನ್ ವೈಯಕ್ತಿಕ ಜೀವನಕ್ಕೆ ಹೋಲಿಸಿ ವ್ಯಂಗ್ಯವಾಡಿದ್ದ ನಟ ವಿವೇಕ್ ಒಬೆರಾಯ್, ತಮ್ಮ ಟ್ವೀಟ್ ತೀವ್ರ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಎಚ್ಚೆತ್ತು ಕೊನೆಗೂ ವಿವೇಕ್ ಕ್ಷಮೆಯಾಚಿಸಿದ್ದಾರೆ.
ನಿನ್ನೆ ಟ್ವೀಟ್ ಮಾಡಿದ್ದ ವಿವೇಕ್, ಫೋಟೋವೊಂದನ್ನು ಶೇರ್ ಮಾಡಿ ಅದರಲ್ಲಿ ಐಶ್ವರ್ಯ ರೈ-ಸಲ್ಮಾನ್ ಖಾನ್‌ರ ಫೋಟೋವನ್ನು ಚುನಾವಣಾ ಪೂರ್ವ ಸಮೀಕ್ಷೆಗೆ, ವಿವೇಕ್ ಒಬೆರಾಯ್ ಮತ್ತು ಐಶ್ವರ್ಯಾರ ಫೋಟೊವನ್ನು ಮತಗಟ್ಟೆ ಸಮೀಕ್ಷೆಗೆ ಹಾಗೂ ಐಶ್ವರ್ಯ ರೈ-ಅಭಿಷೇಕ್ ಬಚ್ಚನ್-ಪುತ್ರಿ ಇರುವ ಫೋಟೊವನ್ನು ಚುನಾವಣೆ ಫಲಿತಾಂಶಕ್ಕೆ ಹೋಲಿಸಿದ್ದರು. ಇದನ್ನು ಶೇರ್ ಮಾಡಿ ಆಹಾ… ಇದು ಸೃಜನಾತ್ಮಕವಾಗಿದ್ದು, ಇಲ್ಲಿ ಯಾವುದೇ ರಾಜಕೀಯ ಇಲ್ಲ. ಜೀವನ ಮಾತ್ರ ಇಲ್ಲಿದೆ ಎಂದಿದ್ದರು.
ವಿವೇಕ್ ಒಬೆರಾಯ್ ಟ್ವೀಟ್ ಗೆ ನೆಟ್ತಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಹಲವರು ಕ್ಷಮೆಯಾಚಿಸುವಂತೆಯೂ ಒತ್ತಾಯಿಸಿದ್ದರು. ಕ್ಷಮೆ ಕೇಳುವಂತಹ ತಪ್ಪನ್ನು ಅದರಲ್ಲಿ ಹಾಕಿಲ್ಲ ಎಂದು ವಾದಿಸಿದ್ದ ನಟ ವಿವೇಕ್ ಒಬೆರಾಯ್, ಇದೀಗ ಪೋಸ್ಟ್ ಅನ್ನು ಡಿಲೀಟ್ ಮಾಡಿ ನನ್ನ ಟ್ವೀಟ್‌ನಿಂದ ಯಾವುದಾದರೂ ಮಹಿಳೆಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.