ನವದೆಹಲಿ,ಫೆಬ್ರವರಿ,1,2023(www.justkannada.in): ಮಧ್ಯಮ ವರ್ಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, 7 ಲಕ್ಷದವರೆಗೆ ತೆರಿಗೆ ವಿನಾಯಿತಿಯನ್ನ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.
ಇಂದು ಲೋಕಸಭೆಯಲ್ಲಿ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹೊಸ ತೆರಿಗೆ ಪದ್ದತಿ ಘೋಷಣೆ ಮಾಡಿದ್ದು, ಆದಾಯ ತೆರಿಗೆ ಮಿತಿ 7 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ವಾರ್ಷಿಕ 7 ಲಕ್ಷದವರೆಗೂ ಆದಾಯ ತೆರಿಗೆ ಇರುವುದಿಲ್ಲ. ಮಧ್ಯಮ ವರ್ಗ ದೃಷ್ಠಿಯಲ್ಲಿಟ್ಟುಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಇನ್ನು ಸೇವಾ ಸುಂಕ 37 ರಿಂದ 27 ಪರ್ಸೆಂಟ್ ಗೆ ಇಳಿಕೆ ಮಾಡಲಾಗಿದ್ದು, 3 ಲಕ್ಷದವರೆಗೆ ಯಾವುದೇ ವೈಯಕ್ತಿಕ ತೆರಿಗೆ ಇರುವುದಿಲ್ಲ. 3 ರಿಂದ 6 ಲಕ್ಷದವರೆಗೆ ಶೇ.5 ರಷ್ಟು ತೆರಿಗೆ, 6 ರಿಂದ 9ಲಕ್ಷದವರೆಗೆ ಶೇ. 10 ರಷ್ಟು ತೆರಿಗೆ, 9 ರಿಂದ 12 ಲಕ್ಷದವರೆಗೆ ಶೇ.15 ಪರ್ಸೆಂಟ್ ತೆರಿಗೆ ಹಾಗೂ 12 ರಿಂದ 15 ಲಕ್ಷದವರೆಗೆ 20 ಪರ್ಸೆಂಟ್ ತೆರಿಗೆ ವಿಧಿಸಲಾಗಿದೆ.
ಹೊಸ ತೆರಿಗೆ ಪದ್ಧತಿಯೇ ಇನ್ನು ಮುಂದೆ ಡಿಫಾಲ್ಟ್ ತೆರಿಗೆ ಪದ್ಧತಿ ಆಗಿರುತ್ತದೆ. ಆದರೆ ಹಳೆಯ ತೆರಿಗೆ ಪದ್ಧತಿಯೂ ಚಾಲ್ತಿಯಲ್ಲಿರುತ್ತದೆ. ತೆರಿಗೆ ಸ್ಲ್ಯಾಬ್ಗಳನ್ನು 6 ಹಂತಗಳಿಂದ 5 ಹಂತಗಳಿಗೆ ಬದಲಿಸಲಾಗಿದೆ. ಹೊಸ ತೆರಿಗೆ ಪದ್ಧತಿ ಆರಿಸಿಕೊಳ್ಳುವವರಿಗೆ 7 ಲಕ್ಷದ ರೂ.ರೆಗಿನ ತೆರಿಗೆ ವಿನಾಯ್ತಿ ಲಭ್ಯವಾಗಲಿದೆ ಎಂದು ಬಜೆಟ್ನಲ್ಲಿ ತಿಳಿಸಲಾಗಿದೆ.
Key words: Finance Minister -Nirmala Sitharaman -announced -tax -exemption up – 7 lakhs.