ಹೊಸ ದಿಲ್ಲಿ, ಮೇ 13, 2020 : (www.justkannada.in news ) ಕೊರೋನಾ ವೈರಸ್ ಲಾಕ್ ಡೌನ್ ಕಾರಣದಿಂದ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದ್ದು, ಈ ನಿಟ್ಟಿನಲ್ಲಿ ಸಮಾಜದ ವಿವಿಧ ವರ್ಗಗಳಿಗೆ ನಿನ್ನೆ ಪ್ರಧಾನಿ ಮೋದಿ ಅವರು 20 ಲಕ್ಷ ಕೋಟಿ ರೂಪಾಯಿಗಳ ಪರಿಹಾರ ಪ್ಯಾಕೇಜ್ ಘೋಷಿಸಿದ್ದರು. ಇಂದು ಸುದ್ದಿಗೋಷ್ಠಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ‘ಆರ್ಥಿಕ ಪ್ಯಾಕೇಜ್ ಸ್ವಾವಲಂಬಿ ಭಾರತವನ್ನು ನಿರ್ಮಿಸಲಿದೆ’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯ ಹೈಲೈಟ್ಸ್ ಹೀಗಿದೆ…..
200 ಕೋಟಿ ರೂ.ವರೆಗಿನ ಒಪ್ಪಂದಗಳಿಗೆ ಜಾಗತಿಕ ಟೆಂಡರ್ ಇಲ್ಲ. ಇದರಿಂದ ಸ್ಥಳೀಯ ಕೈಗಾರಿಕೆಗಳಿಗೆ ಆದ್ಯತೆ ನೀಡಿದಂತಾಗುತ್ತದೆ.
25 ರಿಂದ 100 ಕೋಟಿ ರೂಪಾಯಿ ವಹಿವಾಟು ನಡೆಸುವ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಸಾಲ ಹಾಗೂ 18 ಸಾವಿರ ಕೋಟಿ ರೂಪಾಯಿ ಆದಾಯ ತೆರಿಗೆಯನ್ನು ವಾಪಸ್.
ಅಕ್ಟೋಬರ್ 31ರ ವರೆಗೆ ಸಣ್ಣ ಕೈಗಾರಿಕೆಗಳು ಸಾಲ ಪಡೆಯಲು ಅವಕಾಶ ನೀಡಲಾಗಿದೆ. ಈ ಕಂಪನಿಗಳು ಪಡೆಯುವ ಸಾಲಕ್ಕೆ ಸರ್ಕಾರವೇ ಗ್ಯಾರಂಟಿ ನೀಡಲಿದೆ. ಸಾಲ ಮರುಪಾವತಿಗೆ ನಾಲ್ಕು ವರ್ಷ ಕಾಲಾವಕಾಶ ನೀಡಲಾಗಿದ್ದು, ಒಂದು ವರ್ಷದವರಗೆ ಇಎಂಐ ವಿನಾಯಿತಿ .
ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಸಾಲ ನೀಡುತ್ತಿದ್ದು, ಇದರಿಂದ 45 ಲಕ್ಷ ಸಣ್ಣ ಕಂಪನಿಗಳಿಗೆ ಅನುಕೂಲ.
18 ಸಾವಿರ ಕೋಟಿ ರೂಪಾಯಿ ಆದಾಯ ತೆರಿಗೆಯನ್ನು ವಾಪಸ್. 15 ಸಾವಿರ ರೂಪಾಯಿ ಒಳಗಿನ ವೇತನದಾರರಿಗೆ ತಕ್ಷಣ ಇಪಿಎಫ್ ವಾಪಸ್ ನೀಡಲಾಗುವುದು. ಆಗಸ್ಟ್ ವರೆಗೆ ಇಪಿಎಫ್ ಹಣವನ್ನು ಸರ್ಕಾರವೇ ಪಾವತಿಸಲಿದೆ. ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಿನ ಇಪಿಎಫ್ ಕಂತಿನ ಮೊತ್ತವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಇದರಿಂದ 72.22 ಲಕ್ಷ ನೌಕರರಿಗೆ ಲಾಭ. 2,500 ಕೋಟಿ ರೂಪಾಯಿ ನೆರವು. ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ 45 ಸಾವಿರ ಕೋಟಿ ರೂಪಾಯಿ.
ಕಿರು, ಸಣ್ಣ ಮತ್ತು ಮಧ್ಯ ಕೈಗಾರಿಕಾ ವಲಯಗಳಿಗೆ ( MSME ) ಮೂರು ಲಕ್ಷ ಕೋಟಿ ಸಾಲ. ಕಂಪನಿ ಮತ್ತು ವ್ಯವಹಾರಗಳಿಗೆ ಹೆಚ್ಚಿನ ಉತ್ತೇಜನ.
ಸಣ್ಣ ಸಾಲ ನೀಡುವ ಕಂಪನಿಗಳಿಗೆ ಕೇಂದ್ರದಿಂದ ನೆರವು, ಇದುವರೆಗೆ 52 ಸಾವಿರ ಕೋಟಿ ರೂಪಾಯಿ ಜನ್ ಧನ್ ಖಾತೆಗಳಿಗೆ ವರ್ಗ.
ಟಿಡಿಎಸ್/ಟಿಸಿಎಸ್ ನ ಶೇ.25ರಷ್ಟು ತೆರಿಗೆ ಕಡಿತ.
ಈ ಸಾಲಿನ ಆದಾಯ ತೆರಿಗೆ ಪಾವತಿ ದಿನಾಂಕ ನವೆಂಬರ್ 30ರವರೆಗೆ ವಿಸ್ತರಣೆ.
ಮೇ 14 ರಿಂದ 2021ರ ಮಾರ್ಚ್ 31 ರವರೆಗಿನ ಟಿಡಿಎಸ್ ಮತ್ತು ಟಿಸಿಎಸ್ ಮೇಲಿನ ಶೇ.25ರಷ್ಟು ತೆರಿಗೆ ಕಡಿತ.
ಕೋವಿಡ್ ಅನ್ನು ನೈಸರ್ಗಿಕ ವಿಕೋಪ ಎಂದು ಪರಿಗಣನೆ.
Finance Minister- NirmalaSitharaman- todays press meet- high lights.