ಮೈಸೂರು,ಜೂನ್,13,2023(www.justkannada.in): ಗ್ಯಾರಂಟಿ ಯೋಜನೆಗೆ ಹಣಕಾಸು ಹೊಂದಿಸಲು ಹೆಚ್ಚುವರಿ ತೆರಿಗೆ ವಿಧಿಸ್ತೀರಾ? ಸಾಲ ಮಾಡುತ್ತೀರಾ..? ಎಂಬುದನ್ನು ಮೊದಲು ತಿಳಿಸಿ ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕರ್ನಾಟಕ ರಾಜ್ಯದ ಹಣಕಾಸಿನ ಸ್ಥಿತಿ ಹೇಗಿದೆ?, ಎಷ್ಟು ಸಾಲವಿದೆ? ಈ ಎಲ್ಲದರ ಬಗ್ಗೆಯೂ ಯೋಚಿಸಿ ಯೋಜನೆ ಘೋಷಣೆ ಮಾಡಬೇಕು. ಕಾಂಗ್ರೆಸ್ ಬಹಳ ಧೈರ್ಯದ ಮೇಲೆ ಗ್ಯಾರಂಟಿ ಘೋಷಣೆ ಮಾಡಿದೆ. ಹಣವನ್ನು ಹೇಗೆ ಹೊಂದಿಸುತ್ತಾರೆ ಎಂಬುದನ್ನು ಜನರಿಗೆ ತಿಳಿಸಬೇಕು. ಹೆಚ್ಚುವರಿ ತೆರಿಗೆ ವಿಧಿಸ್ತೀರಾ?, ಸಾಲ ಮಾಡುತ್ತೀರಾ ಮೊದಲು ತಿಳಿಸಿ ಎಂದರು.
ಗ್ಯಾರಂಟಿ ಯೋಜನೆಗಳಿಗೆ ಚುನಾವಣೆ ವೇಳೆ ಕಂಡಿಷನ್ ಇರಲಿಲ್ಲ. ಈಗ ಷರತ್ತು ಹಾಕ್ತಿದ್ದಾರೆ ರಾಜ್ಯದಲ್ಲಿ ಎಲ್ಲಾ ಮನೆಗಳಿಗೆ ವಿದ್ಯುತ್ ಬಿಲ್ ಬರ್ತಿದೆ. ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದ್ದಾರೆ ಎಂದು ಶೋಭಾ ಕರಂಧ್ಲಾಜೆ ಕಿಡಿಕಾರಿದರು.
Key words: financial condition – state-Guarantee scheme- Shobha Karandlaje