ಬೆಂಗಳೂರು, ಅಕ್ಟೋಬರ್ 13, 2022 (www.justkannada.in): ‘ಯುಪಿಐ’ ಮಿಠಾಯಿ ವ್ಯಾಪಾರವನ್ನು ಕೊಲ್ಲುತ್ತಿದೆ ಎಂಬ ವಿಷಯ ನನಗೆ ತಿಳಿದಾಗ ನನಗೆ ಬಹಳ ಆಶ್ಚರ್ಯವಾಯಿತು. ನಾನು ಕೇಳಿದ್ದು ನಿಜವಾಗಲೂ ನಿಜವೋ ಅಥವಾ ಸುಳ್ಳೋ ಎಂದನಿಸಿತು. ಮತ್ತಷ್ಟು ಪರಿಶೋಧನೆಯ ನಂತರ ನನಗೆ ಯುಪಿಐ ಚಲಾವಣೆಗೆ ಬಂದ ನಂತರ ‘ಚುಟ್ಟಾ ನಹಿ ಹೈ’ (ಚಿಲ್ಲೆ ಇಲ್ಲ) ಎಂಬ ಪದಗಳ ಮೂಲಕ ಯಾವ ರೀತಿ ವ್ಯಾಪಾರವನ್ನು ನಿರ್ಮಾಣ ಮಾಡಲಾಗಿದೆ ಎಂದು ನಂಬಲು ಸಾಧ್ಯವಾಗದಿರುವಂತಹ ವಿಷಯಗಳು ಗೋಚರಿಸಿದವು.
2010ರ ದಶಕದ ಆರಂಭದಲ್ಲಿ, ಮೊಂಡೆಲೆಜ್, ಮರ್ಸ್ವ, ನೆಸ್ಲೆ, ಪರ್ಫೆಟ್ಟಿ, ಪಾರ್ಲೆ ಹಾಗೂ ಐಟಿಸಿ ಒಳಗೊಂಡಂತೆ ಬಹುಪಾಲು ಎಲ್ಲಾ ದೊಡ್ಡ ಮಿಠಾಯಿ ತಯಾರಕ ಕಂಪನಿಗಳು ಬಹಳ ದೊಡ್ಡ ಮಟ್ಟದ ವ್ಯಾಪಾರ ಬೆಳವಣಿಗೆ ಹಾಗೂ ಅತ್ಯುತ್ತಮ ಭವಿಷ್ಯವನ್ನು ವರದಿ ಮಾಡಿದವು. ಆದರೆ ಯುಪಿಐ ಬಳಕೆ ಬಂದ ನಂತರ ಈ ಪೈಕಿ ಬಹುಪಾಲು ಬ್ರ್ಯಾಂಡ್ ಗಳ ಮಿಠಾಯಿ ವ್ಯಾಪಾರ ಇಳಿಕೆಯಾಗಿರುವುದಾಗಿ ತಿಳಿಸಿವೆ. ವಿಶ್ವದ ಅತೀ ದೊಡ್ಡ ಚಾಕೊಲೇಟ್ ಮತ್ತು ಟಾಫಿ ತಯಾರಕ ಸಂಸ್ಥೆಯಾಗಿರುವ ಹರ್ಷಿಸ್, ಕೋವಿಡ್ ಸಾಂಕ್ರಾಮಿಕದ ನಂತರ ಈ ಕ್ಷೇತ್ರದ ಉದ್ಯಮವನ್ನು ವಿಸ್ತರಿಸುವ ಯೋಜನೆಗಳ ಮೇಲೆ ತೀವ್ರ ಹೊಡೆತ ಬಿದ್ದಿರುವಂತಹ ಮಾರುಕಟ್ಟೆಗಳ ಪೈಕಿ ಭಾರತ ಮುಂಚೂಣಿಯಲ್ಲಿದೆ ಎಂದು ಮಾಹಿತಿ ನೀಡಿದೆ.
ಹಾಗಾದರೆ ನಿಜವಾಗಿ ಆಗಿರುವುದಾದರೂ ಏನು?
ಯುಪಿಐ ಬಳಕೆಗೂ ಮುಂಚೆ ಅಂಗಡಿಗಳ ಮಾಲೀಕರು ಚಿಲ್ಲರೆ ಇಲ್ಲದಿರುವಾಗ ಅದಕ್ಕೆ ಬದಲಾಗಿ ಚಾಕೊಲೇಟ್ ಅಥವಾ ಮಿಠಾಯಿಗಳನ್ನು ನೀಡುತ್ತಿದ್ದರು. ಕೆಲವು ಅಧ್ಯಯನಗಳಲ್ಲಿ ಅನೇಕ ಖರೀದಿದಾರರೇ ಒಪ್ಪಿಕೊಂಡಿರುವಂತೆ ಈ ಸಣ್ಣ ಮೊತ್ತ ಒಟ್ಟುಗೂಡಿ ದೊಡ್ಡ ಮೊತ್ತವಾಗುತಿತ್ತು. ಆದರೆ ಯುಪಿಐ ಬಂದ ನಂತರ ಇದು ಸಂಪೂರ್ಣವಾಗಿ ನಿಂತಿದೆ. ಈಗ ಜನರು ಚಿಲ್ಲರೆಗೆ ಆಸ್ಪದ ಇಲ್ಲದಿರುವಂತೆ ನಿಖರವಾದ ಹಣ ಪಾವತಿಸಲು ಆರಂಭಿಸಿದ್ದು, ಮಿಠಾಯಿ ವ್ಯಾಪಾರದ ಮೇಲೆ ದೊಡ್ಡ ಹೊಡೆತ ಬಿದ್ದಿದೆಯಂತೆ.
ಕೋವಿಡ್ ಸಾಂಕ್ರಾಮಿಕ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಸಾಂಕ್ರಾಮಿಕಕ್ಕೆ ಹೆದರಿ ಬಹುಪಾಲು ಜನರು ಸಂಪರ್ಕರಹಿತ ಹಣಪಾವತಿ ಮಾಡುವುದನ್ನು ಅಭ್ಯಸಿಸಿಕೊಂಡಿದ್ದಾರೆ. ಇದರಿಂದಾಗಿ ಡಿಜಿಟಲ್ ಪಾವತಿಗಳು ದೊಡ್ಡ ಮಟ್ಟಕ್ಕೆ ಗಳಿಸಿದರೆ, ಮಿಠಾಯಿ ವ್ಯಾಪಾರ ಸಂಪೂರ್ಣವಾಗಿ ನೆಲ ಕಚ್ಚಿದಂತಾಗಿದೆ. ಹಾಗಾಗಿ, ಯಾವುದೇ ಮಿಠಾಯಿ ತಯಾರಕ ಕಂಪನಿಯೂ ಸಹ ಈ ರೀತಿ ಹಣಕಾಸು ಸೇವೆಗಳಿಂದಾಗಿ ತಮ್ಮ ಉದ್ಯಮ ನಷ್ಟ ಅನುಭವಿಸುವಂತಾಗುತ್ತದೆ ಎಂದು ತಲೆ ಮೇಲೆ ಕೈಹೊತ್ತುಕೊಂಡು ಕೂರುವಂತಾಗಿದೆಯಂತೆ. ಮಿಠಾಯಿಗಳು ನಗದು ಪರ್ಯಾಯಗಳಾದರೆ, ಯುಪಿಐ ಈ ಅಗತ್ಯ ಮತ್ತು ನಡವಳಿಕೆಯನ್ನು ಬದಲಾಯಿಸಿದೆ.
ಈ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಎಲ್ಲಾ ಉದ್ಯಮಗಳು ಹಾಗೂ ವ್ಯಾಪಾರಸ್ಥರಿಗೂ ಒಂದು ಉತ್ತಮ ಪಾಠವಾಗಿದ್ದು, ಎಲ್ಲರೂ ತಮ್ಮ ತಮ್ಮ ಮುಂದಿನ ವ್ಯಾಪಾರ ವಹಿವಾಟುಗಳಿಗೆ ಎದುರಾಗಬಹುದಾದಂತಹ ಅನಿರೀಕ್ಷತ ಬೆಳವಣಿಗೆಗಳ ಕುರಿತು ಎಚ್ಚರಿಕೆ ವಹಿಸಬೇಕು. ಜನರು ನಮ್ಮ ಉತ್ಪನ್ನವನ್ನು ಖರೀದಿಸಲು ಕಾರಣಗಳೇನು, ಮತ್ತು ಯಾವ ವಿಷಯ ಅವರ ನಡವಳಿಕೆಯನ್ನು ಬದಲಾಯಿಸಬಹುದು ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ನಿಜವಾಗಿಯೂ ನಾವು ಯಾರಾದರೂ ನಮಗೆ ನೇರವಾದ ಪ್ರತಿಸ್ಪರ್ಧಿ ಅಲ್ಲದಿರುವವರ ಕುರಿತು ಹಾಗೂ ನಮ್ಮ ಉತ್ಪನ್ನ ಅಥವಾ ಸೇವೆಗಳ ಮೇಲೆ ಅದರಿಂದ ಪರಿಣಾಮ ಬೀಳಬಹುದು ಎಂದು ಆಲೋಚಿಸುತ್ತೇವೆಯೇ?
ತಂತ್ರಜಾನ ವ್ಯಾಪಾರದ ಮೇಲೆ ಯಾವ ರೀತಿ ವ್ಯತಿರಿಕ್ತ ಪರಿಣಾಮ ಬೀರಬಹುದು ಎನ್ನಲು ಇದೊಂದು ಉತ್ತಮ ಪಾಠ ಅಲ್ಲವೇ?
Key words: financial service -competing – confectionery- business-UPI