ಮೈಸೂರು,ನವೆಂಬರ್,7,2020(www.justkannada.in): ಕೊರೋನಾ ಮಹಾಮಾರಿ ಹರಡದಂತೆ ತಡೆಗಟ್ಟಲು ಸರ್ಕಾರ ಹಲವಾರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಸಹ ಸಾರ್ವಜನಿಕರು ಕೋವಿಡ್ ನಿಯಮ ಪಾಲಿಸದೆ ನಿರ್ಲಕ್ಷ್ಯ ವಹಿಸುವುದೇ ಹೆಚ್ಚು. ಮಾಸ್ಕ್ ಧರಿಸದೆ, ಕೋವಿಡ್ ನಿಯಮ ಪಾಲಿಸದೆ ಇದ್ದವರಿಗೆ ಸರ್ಕಾರ ದಂಡ ವಿಧಿಸುತ್ತಿದೆ.
ಈ ಮಧ್ಯೆ ಮೈಸೂರಿನಲ್ಲಿ ಮಾಸ್ಕ್ ಇದ್ದರೂ ಅದನ್ನ ಧರಿಸದೇ ಬೇಜವಾಬ್ದಾರಿ ತೋರಿದ ಸವಾರರಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ಹೌದು, ನಗರದ ಶ್ರೀರಾಂಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಬೇಜವಾಬ್ದಾರಿಯಿಂದ ಮಾಸ್ಕ್ ಧರಿಸದೇ ಬೇಕಾಬಿಟ್ಟಿ ಓಡಾಡುತ್ತಿದ್ದವರಿಗೆ ದಂಡದ ರುಚಿ ತೋರಿಸಿದ್ದಾರೆ.
ಶ್ರೀರಾಂಪುರದ ಹುಣಸೇಮರದ ಬಳಿ ವಾಹನ ಸವಾರರ ಹಾಗೂ ಸಾರ್ವಜನಿಕರ ತಪಾಸಣೆ ನಡೆಸಿದ ಪೊಲೀಸರು ಮಾಸ್ಕ್ ಇದ್ದರೂ ಧರಿಸದೇ ಓಡಾಡುತ್ತಿದ್ದ ಸವಾರರಿಗೆ ದಂಡ ವಿಧಿಸಿದ್ದಾರೆ. ಮಾಸ್ಕ್ ಧರಿಸದ ಸಾರ್ವಜನಿಕರಿಂದ 250 ರೂ ದಂಡ ವಸೂಲಿ ಮಾಡಿದ್ದಾರೆ.
ಕೊರೊನಾ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಕೋವಿಡ್ -19 ನಿಯಮಾವಳಿ ಪಾಲಿಸದ ಸಾರ್ವಜನಿಕರ ಮೇಲೆ ಪೊಲೀಸರು ಬಿಗಿ ಕ್ರಮ ಕೈಗೊಳ್ಳುತ್ತಿದ್ದಾರೆ.
Key words: fine -not wearing – mask-mysore-police