ಡಿ.ಕೆ ಸುರೇಶ್ ತಂಗಿ ಎಂದು ಹೇಳಿ ವಂಚಿಸಿದ್ದ ಐಶ್ವರ್ಯಾ ಗೌಡ ವಿರುದ್ದ ಮತ್ತೊಂದು FIR

ಬೆಂಗಳೂರು,ಡಿಸೆಂಬರ್, 31,2024 (www.justkannada.in): ಮಾಜಿ ಸಂಸದ ಡಿ.ಕೆ.ಸುರೇಶ್ ಸಹೋದರಿ ಎಂದು ಹೇಳಿಕೊಂಡು ಚಿನ್ನದಂಗಡಿ ಮಾಲಕಿಗೆ ವಂಚನೆ ಮಾಡಿ ಇದೀಗ ಪೊಲೀಸ್ ಕಸ್ಟಡಿಯಲ್ಲಿರುವ ಐಶ್ವರ್ಯ ಗೌಡಗೆ ಇದೀಗ ಮತ್ತೊಂದು ಸಂಕಷ್ಟ ಶುರುವಾಗಿದೆ.

ಐಶ್ವರ್ಯ ಗೌಡ, ಪತಿ ಹರೀಶ್ ಗೌಡ ವಿರುದ್ಧ ಮತ್ತೊಂದು ವಂಚನೆ ಕೇಸ್ ನಲ್ಲಿ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿಎಫ್ಐಆರ್ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ತಮಗೆ 3.25 ಕೋಟಿ ಹಣ, 430 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಶಿಲ್ಪಾ ಗೌಡ ಎಂಬುವವರು ಆರ್.ಆರ್.ನಗರ ಠಾನೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

2022ರಲ್ಲಿ ಶಿಲ್ಪಾ ಗೌಡಾರಿಗೆ ಪರಿಚವಾಗಿದ್ದ ಆರೋಪಿ ಐಶ್ವರ್ಯಾ, ನಾನು ಡಿ.ಕೆ.ಸುರೇಶ್ ಅವರ ತಂಗಿ, ಗೋಲ್ಡ್ ಬಿಸಿನೆಸ್ ಮಾಡ್ತೀನಿ. ರಿಯಲ್ ಎಸ್ಟೇಟ್ ಹಾಗೂ ವಿಲ್ಲಾ ನಿರ್ಮಾಣ ಮಾಡುತ್ತೇನೆ. ಚಿಟ್ ಫಂಡ್ ವ್ಯವಹಾರ ಕೂಡ ಇದೆ ಎಂದು ಪರಿಚಯ ಮಾಡಿಕೊಂಡು 2022ರಿಂದ 2023ರವರೆಗೆ ಹಂತ ಹಂತವಾಗಿ 3.20 ಕೋಟಿ ನಗದು, 430 ಗ್ರಾಂ ಚಿನ್ನಾಭರಣ ಪಡೆದು ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಈಗಾಗಲೇ ಐಶ್ವರ್ಯ ಗೌಡ, ಪತಿ ಹರೀಶ್ ಗೌಡ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

Key words: Another, FIR, against, Aishwarya Gowda