ಕೇಂದ್ರ ಸಚಿವ ಹೆಚ್ ಡಿಕೆ ಸೇರಿ ಮೂವರ ವಿರುದ್ಧ FIR  ದಾಖಲು

ಬೆಂಗಳೂರು, ನವೆಂಬರ್​, 5,2024 (www.justkannada.in): ತನಗೆ ತೊಂದರೆ ಕೊಡುವುದಾಗಿ ಬೆದರಿಕೆ  ಹಾಕಿದ್ದಾರೆಂದು ಆರೋಪಿಸಿ ಎಡಿಜಿಪಿ ಚಂದ್ರಶೇಖರ್​  ಅವರು ನೀಡಿದ ದೂರಿನ ಆಧಾರದ ಮೇಲೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ  ಸೇರಿ ಮೂವರ ವಿರುದ್ದ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ​ ದಾಖಲಾಗಿದೆ.

ಬಿಎನ್​ಎಸ್​ ಅಂಡರ್ ಸೆಕ್ಷನ್ 224ರ ಅಡಿಯಲ್ಲಿ ಪೊಲಿಸರು ಪ್ರಕರಣ ದಾಖಲಾಗಿದ್ದು, ಹೆಚ್ ​ಡಿ ಕುಮಾರಸ್ವಾಮಿ ಎ​ 1 ಆಗಿದ್ದರೆ ಜೆಡಿಎಸ್​ ಯುವ ಘಟಕ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಎ2 ಆಗಿದ್ದಾರೆ. ಹಾಗೆಯೇ ಜೆಡಿಎಸ್​ ಮುಖಂಡ ಸುರೇಶ್ ಬಾಬು ಆರೋಪಿ ನಂಬರ್​ 3 ಆಗಿದ್ದಾರೆ.

ದುರುದ್ದೇಶ ಪೂರಿತವಾಗಿ ಆರೋಪ ಮಾಡಿದ್ದಾರೆ. ಮತ್ತು ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ. ತೊಂದರೆ ಕೊಡುವುದಾಗಿ ಹೆಚ್ ಡಿಕೆ ಇತರರು ಬೆದರಿಕೆ ಹಾಕಿದ್ದಾರೆಂದು ಚಂದ್ರಶೇಖರ್ ಆರೋಪಿಸಿ ದೂರು ನೀಡಿದ್ದರು. ಎಫ್ ಐಆರ್ ದಾಖಲಿಸುವಂತೆ ಕೋರ್ಟ್ ಗೆ ಮನವಿ ಮಾಡಿದ್ದರು. ಕೋರ್ಟ್ ಆದೇಶದಂತೆ ಹೆಚ್ ಡಿ ಕುಮಾರಸ್ವಾಮಿ ಸೇರಿ ಮೂವರ ವಿರುದ್ದ ಎಫ್ ಐಆರ್ ದಾಖಲಾಗಿದೆ.

Key words: FIR, against, Union Minister, HDK