ಮಹಿಳಾ ಅಧಿಕಾರಿಗೆ ನಿಂದನೆ ಆರೋಪ:  FIR ದಾಖಲು

ಶಿವಮೊಗ್ಗ, ಫೆಬ್ರವರಿ 11,2025 (www.justkannada.in): ಮಹಿಳಾ ಅಧಿಕಾರಿಗೆ ನಿಂದನೆ ಮಾಡಿರುವ  ಆರೋಪಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಹಳೇನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಶಿವಮೊಗ್ಗ ಜಿಲ್ಲೆ ಕಾಂಗ್ರೆಸ್ ಶಾಸಕ ಸಂಗಮೇಶ್ ಪುತ್ರ ಬಸವೇಶ್​ ವಿರುದ್ಧ ಈ ಆರೋಪ ಕೇಳಿ ಬಂದಿದ್ದು,  ಆದರೆ ಎಫ್​ಐಆರ್ ನಲ್ಲಿ ಶಾಸಕರ ಪುತ್ರನ ಹೆಸರು ಉಲ್ಲೇಖಿಸದೆ ಆರೇಳು ಮಂದಿ ವಿರುದ್ದ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ ಎನ್ನಲಾಗಿದೆ.

​ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಜ್ಯೋತಿ ನೀಡಿದ ದೂರಿನ ಮೇರೆಗೆ  ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಹಳೇನಗರ ಠಾಣೆಯಲ್ಲಿ ಬಿಎನ್ಎಸ್ 132, 352, 351/2, 189/2,190 BNS ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಬಿ.ಎಸ್.‌ ಬಸವೇಶ್ ಗೆ ಸಂಬಂಧಿಸಿದ ಅಕ್ರಮ ಮರಳುಗಾರಿಕೆಯನ್ನ ತಡೆಯಲು ಭೂ ವಿಜ್ಞಾನಿ​ ಜ್ಯೋತಿ ಬಂದಿದ್ದು. ಇದೇ ವೇಳೆ ‌ಬಸವೇಶ ಆಪ್ತರೊಬ್ಬ ಅಧಿಕಾರಿ ಜ್ಯೋತಿ ಅವರಿಗೆ ಫೋನ್​ ಮಾಡಿ ಮಾತಾಡಿ ಅಂತ ಕೊಟ್ಟಿದ್ದರು. ಈ ವೇಳೆ ನಿಂದಿಸಿದ್ದಾರೆ ಎಂಬ ಆರೋಪವಿದೆ. ಈ ಸಂಬಂಧ ವಿಡಿಯೋ ವೈರಲ್ ಆಗಿತ್ತು.

Key words: FIR, filed ,alleged, abuse , officer