ಎಟಿಎಂಗೆ ಹಣ ತುಂಬದೆ‌ ತೆಗೆದುಕೊಂಡ ಹೋದ ಆರೋಪ : ಇಬ್ಬರ ವಿರುದ್ದ FIR ದಾಖಲು

ಮೈಸೂರು,ಜನವರಿ,18,2025 (www.justkannada.in): ಎಟಿಎಂಗೆ ಹಣ ತುಂಬದೆ‌ ತೆಗೆದುಕೊಂಡ ಹೋದ ಆರೋಪದ ಮೇಲೆ ಇಬ್ಬರ ವಿರುದ್ದ ಮೈಸೂರು ಜಿಲ್ಲೆ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ಷಯ್ ಕುಮಾರ್ ಹಾಗೂ ತೇಜಸ್ವಿನಿ ಎಂಬುವವರ ವಿರುದ್ದ ಎಫ್ ಐ ಆರ್ ದಾಖಲಾಗಿದೆ.  ಟಿ ಎಲ್ ಎಂಟರ್‌ಪ್ರೈಸಸ್ ಎಟಿಎಂಗೆ ಹಣ‌ ತುಂಬವ ಏಜೆನ್ಸಿ‌ ಪಡೆದಿತ್ತು. ಈ  ಟಿ ಎಲ್ ಎಂಟರ್ ಪ್ರೈಸಸ್‌ ನಲ್ಲಿ ಅಕ್ಷಯ್ ಕೆಲಸ ಮಾಡುತ್ತಿದ್ದರು. ಮೈಸೂರು ಜಿಲ್ಲೆಯ ಒಟ್ಟು 16 ಎಟಿಎಂಗಳಿಗೆ ಅಕ್ಷಯ್ ಹಣ‌ ತುಂಬುತ್ತಿದ್ದ. ಕಂಪನಿ ಪರವಾಗಿ ಹೋಗಿ ಹಣ ತುಂಬುವ ಕೆಲಸ ಮಾಡುತ್ತಿದ್ದನು.

ಈ ಮಧ್ಯೆ ಕಂಪನಿ ಆಡಿಟ್ ಮಾಡಿದಾಗ ಹಣದಲ್ಲಿ ವ್ಯತ್ಯಾಸ ಕಂಡು ಬಂದಿದೆ.  ಎಟಿಎಂ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಲಾಗಿದ್ದು ಈ ವೇಳೆ ಆಕ್ಷಯ್ ಎಟಿಎಂ ಹಣ ಹಾಕದೆ ಬ್ಯಾಗ್‌ ನಲ್ಲಿ ತುಂಬಿಕೊಂಡು  ಹೋದ ದೃಶ್ಯ ಸೆರೆಯಾಗಿದೆ.

ಅಕ್ಷಯ್ ಗದ್ದಿಗೆ ಗ್ರಾಮದ ಎಟಿಎಂ ನಲ್ಲಿ 5 ಲಕ್ಷದ 80 ಸಾವಿರ ಹಣ ಲೋಡ್ ಮಾಡಿಲ್ಲ. ಈ ಕೃತ್ಯಕ್ಕೆ ಆಕೆಯ ಪರಿಚಯದ ತೇಜಸ್ವಿನಿ‌ ಎಂಬಾಕೆ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು,  ಇಬ್ಬರು ಈ ಹಣದಿಂದ ಚಿನ್ನ ಖರೀದಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಬ್ಬರು ಚಿನ್ನದ ಅಂಗಡಿಯಲ್ಲಿ ಚಿನ್ನ ಖರೀದಿಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದುಈ ಹಿನ್ನೆಲೆ ಇದೀಗ ಇಬ್ಬರ ವಿರುದ್ದ ಎಫ್ ಐ ಆರ್ ದಾಖಲಾಗಿದೆ.

Key words: FIR , money, ATM, without, filling, Mysore