ಬೆಂಗಳೂರು, ಜುಲೈ, 18, 2020 (www.justkannada.in): ನಗರದ ಅಸ್ಪತ್ರೆಗಳು ಹಾಗೂ ಪ್ರಮುಖ ಸರ್ಕಾರಿ ಕಟ್ಟಡಗಳಲ್ಲಿ ರಾಜ್ಯ ಅಗ್ನಿಶಾಮಕ ದಳದಿಂದ ವಿಶೇಷ ವಾಹನಗಳ ಮೂಲಕ ವ್ಯಾಪಕವಾಗಿ ರೋಗ ನಿರೋಧಕ ಔಷಧಿ ಸಿಂಪಡಿಸಲಾಯಿತು.
ಕಳೆದ ಮೂರು ದಿನಗಳಲ್ಲಿ ಬೆಂಗಳೂರಿನ ಎಲ್ಲ ಪ್ರಮುಖ ಅಸ್ಪತ್ರೆಗಳ ಒಳಗೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ನೂರಾರು ಅಗ್ನಿ ಶಾಮಕ ದಳ ಸಿಬ್ಬಂದಿ ವಿಶೇಷ ವಾಹನಗಳಲ್ಲಿ ಸುಧಾರಿತ ಜೆಟ್ ಮೂಲಕ ರೋಗ ನಿರೋಧಕ ಔಷಧಿಯನ್ನು ಸಿಂಪಡಿಸಿದರು.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆ ಲಾಕ್ ಡೌನ್ ಮಾಡಲಾಗಿದ್ದು ಈ ನಡುವೆ ಜನ ಮತ್ತು ವಾಹನಗಳಿಲ್ಲದೆ, ಖಾಲಿ ಇರುವ ಪ್ರಮುಖ ರಸ್ತೆಗಳಲ್ಲಿ ರೋಗ ನಿರೋಧಕ ಔಷಧಿ ಸಿಂಪಡಣೆ ಮಾಡಲಾಯಿತು.
ಈ ಮಧ್ಯೆ ಜನ ಮತ್ತು ವಾಹನಗಳಿಲ್ಲದೆ, ಖಾಲಿ ಇರುವ ಪ್ರಮುಖ ರಸ್ತೆಗಳಲ್ಲಿ ರೋಗ ನಿರೋಧಕ ಔಷಧಿ ಸಿಂಪಡಣೆ ಮಾಡಲಾಯಿತು.
ಕೇವಲ ರಸ್ತೆಗಳಷ್ಟೇ ಅಲ್ಲದೆ, ಪ್ರಮುಖ ಆಸ್ಪತ್ರೆಗಳ ಸರಹದ್ದಿನಲ್ಲೂ ಅಗ್ನಿ ಶಾಮಕದಳದ ಸಿಬ್ಬಂದಿ ಔಷಧಿ ಸಿಂಪಡಣೆ ಮಾಡಿದರು.
ವಿಕ್ಟೋರಿಯಾ ಅಸ್ಪತ್ರೆ, ಬೌರಿಂಗ್ ಅಸ್ಪತ್ರೆ, ಕೆಸಿ ಜನರಲ್ ಅಸ್ಪತ್ರೆ, ಆಕಾಶ್ ಅಸ್ಪತ್ರೆ, ಇಎಸ್ಐ ಅಸ್ಪತ್ರೆ, ಹೈಕೋರ್ಟ್, ವಿ.ವಿ.ಟವರ್ , ಮೆಟ್ರೋ ನಿಲ್ದಾಣ, ಉದ್ಯಾನಗಳು ಸೇರಿದಂತೆ 50ಕ್ಕೂ ಪ್ರದೇಶಗಳಲ್ಲಿ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ರೋಗನಿರೋಧಕ ಸಿಂಪಡಣೆ ಮಾಡಿತು. ಎಡಿಜಿಪಿ ಸುನೀಲ್ ಅಗರ್ ವಾಲ್ , ವಿಕ್ಟೋರಿಯಾ ಆಸ್ಪತ್ರೆ ಬಳಿ ಈ ಕಾರ್ಯಕ್ಕೆ ಚಾಲನೆ ನೀಡಿದರು.