ಕೆಎಸ್ ಆರ್ ಟಿಸಿ ಬಸ್ ನಲ್ಲಿ ಅಗ್ನಿ ಅವಘಡ

ಮೈಸೂರು,ಡಿಸೆಂಬರ್,3,2024 (www.justkannada.in):  ಏಕಾಏಕಿ ಕೆಎಸ್ಆರ್ ಟಿಸಿ ಬಸ್ ನಲ್ಲಿ  ಬೆಂಕಿ ಕಾಣಿಸಿಕೊಂಡ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿದೆ.

ದೇವಲಾಪುರ-ಜಕ್ಕಹಳ್ಳಿ ಮಾರ್ಗ ಮಧ್ಯೆ ಈ ಘಟನೆ ನಡೆದಿದ್ದು, ಐವತ್ತಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವಘಡದಿಂದ ಭಾರಿ ಅನಾಹುತ ತಪ್ಪಿದೆ.

ಹೆಚ್.ಡಿ.ಕೋಟೆ ಘಟಕಕ್ಕೆ ಸೇರಿದ  ಕೆಎಸ್ ಆರ್ ಟಿಸಿ ಬಸ್ ನಡಾಡಿ ಗ್ರಾಮದಿಂದ ಹೆಚ್.ಡಿ.ಕೋಟೆಗೆ ತೆರಳುತ್ತಿತ್ತು. ಈ ವೇಳೆ ದೇವಲಾಪುರ-ಜಕ್ಕಹಳ್ಳಿ ಮಾರ್ಗ ಮಧ್ಯೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ದಿಢೀರ್ ದೌಡಾಯಿಸಿದ  ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Key words: Fire, KSRTC bus, mysore