ಮೈಸೂರು,ಮಾರ್ಚ್,24,2025 (www.justkannada.in): ಹಂದಿಗಳ ಬೇಟೆಗೆ ಇರಿಸಿದ್ದ ಸಿಡಿಮದ್ದು ಸಿಡಿದು ಹಸುವಿನ ಬಾಯಿ ಛಿದ್ರವಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಅಡಕನಹಳ್ಳಿ ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಕಿಡಿಗೇಡಿಗಳ ಈ ಕೃತ್ಯ ಮನಕಲಕುವಂತಿದ್ದು, ಇದೀಗ ಹಸು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ನಂಜನಗೂಡು ತಾಲೂಕಿನ ಅಡಕನಹಳ್ಳಿ ಗ್ರಾಮದ ಕೈಗಾರಿಕಾ ಪ್ರದೇಶದ ಜಮೀನಿನಲ್ಲಿ ಹಸು ಮೇವು ಮೇಯುತಿದ್ದಾಗ ಘಟನೆ ನಡೆದಿದೆ.
ಕೆಂಪಿಸಿದ್ದನಹುಂಡಿ ಗ್ರಾಮದ ರೈತ ಚನ್ನನಂಜೇಗೌಡ ಎಂಬವರಿಗೆ ಸೇರಿದ ಹಸು ಇದಾಗಿದೆ. ಚನ್ನನಂಜೇಗೌಡ ಅವರು ಗ್ರಾಮದ ವಾಟರ್ ಟ್ಯಾಂಕ್ನ ಬಳಿ ಜಾನುವಾರುಗಳು ಮೇವು ಮೇಯಲು ಬಿಟ್ಟಿದ್ದಾರೆ. ಈ ಮಧ್ಯೆ ಕಿಡಿಗೇಡಿಗಳು ಕಾಡು ಹಂದಿ ಬೇಟೆಗೆ ಅದೇ ಜಾಗದಲ್ಲಿ ಸಿಡಿಮದ್ದು ಅಡಗಿಸಿಟ್ಟಿದ್ದರು. ಈ ನಡುವೆ ಹಸು ಮೇಯುತ್ತಿದ್ದ ವೇಳೆ ಸಿಡಿಮದ್ದು ಸ್ಫೋಟಗೊಂಡು ಗಾಯಗೊಂಡಗೊಂಡಿದೆ. ಸ್ಫೋಟದ ರಭಸಕ್ಕೆ ಹಸುವಿನ ಮುಖ ಛಿದ್ರವಾಗಿದ್ದು, ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೊಲೀಸ್ ಪೊಲೀಸರು, ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Key words: Mysore, Firecrackers, explode, cow, mouth.