ಮೈಸೂರು,ನವೆಂಬರ್,14,2020(www.justkannada.in): ಈ ಬಾರಿ ದೀಪಾವಳಿ ಹಬ್ಬದಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಸರ್ಕಾರ ಅವಕಾಶ ನೀಡಿರುವ ಹಿನ್ನೆಲೆ ಮೈಸೂರಿನ ಜೆ.ಕೆ. ಮೈದಾನದಲ್ಲಿನ ಪಟಾಕಿ ಮಳಿಗೆಗಳಿಗೆ ಡಿಸಿಪಿ ಪ್ರಕಾಶ್ ಗೌಡ ಭೇಟಿ ನೀಡಿ ಪರಿಶೀಲಿಸಿದರು.
ಜೆಕೆ ಮೈದಾನದ ಎಲ್ಲಾ ಪಟಾಕಿ ಮಳಿಗೆಗಳಿಗೂ ಭೇಟಿ ನೀಡಿ ಬಾಕ್ಸ್ ಒಳಗಿರುವ ಪಟಾಕಿಗಳನ್ನು ಪರಿಶೀಲಿಸಿದ ಪ್ರಕಾಶ್ ಗೌಡ, ಕೇವಲ ಹಸಿರು ಪಟಾಕಿಗಳನ್ನು ಮಾತ್ರವೇ ಮಾರಾಟ ಮಾಡುವಂತೆ ಸೂಚನೆ ನೀಡಿದರು. ಹಸಿರು ಪಟಾಕಿಗಳನ್ನು ಹೊರತುಪಡಿಸಿ ಬೇರೆ ಪಟಾಕಿಗಳನ್ನು ಮಾರಾಟ ಮಾಡದಂತೆ ಸೂಚಿಸಿದರು. ಒಂದು ವೇಳೆ ನಿಷೇಧಿತ ಪಟಾಕಿಗಳನ್ನು ಮಾರಾಟ ಮಾಡಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಡಿಸಿಪಿ ಪ್ರಕಾಶ್ ಗೌಡರ ಕಾಲಿಗೆ ಬಿದ್ದ ಪಟಾಕಿ ವ್ಯಾಪಾರಿ..
ಇದೇ ವೇಳೆ ಪಟಾಕಿ ಮಾರಾಟಗಾರರು ಕಣ್ಣೀರು ಹಾಕಿಕೊಂಡು ಇದೊಂದು ವರ್ಷ ಪಟಾಕಿ ಮಾರಾಟಕ್ಕೆ ಅನುಮತಿ ನೀಡುವಂತೆ ಡಿಸಿಪಿ ಪ್ರಕಾಶ್ ಗೌಡರ ಬಳಿ ಕೈ ಮುಗಿದು ಪರಿ ಪರಿಯಾಗಿ ಬೇಡಿಕೊಂಡರು.. ಈ ಸಮಯದಲ್ಲಿ ಪಟಾಕಿ ಮಾರಾಟಗಾರನೊಬ್ಬ ಪ್ರಕಾಶ್ ಗೌಡರ ಕಾಲಿಗೆ ಬಿದ್ದ ಘಟನೆ ನಡೆಯಿತು.
English summary….
Cracker vendor falls on DCP Prakash Gowda’s feet requesting permission to sell crackers
Mysuru, Nov. 14, 2020 (www.justkannada.in): Following imposition of prohibition orders on sale of crackers and allowing sale of only green crackers, Deputy Commissioner of Police, Mysuru City Sri Prakash Gowda today visited the J.K. Grounds to check the stalls.
After going through the stalls and checking the content he instructed the vendors to sell only green crackers and warned to take strict action if anyone is found to be selling prohibited crackers. At this juncture, a few vendors fell on the feet of the DCP with tears in their eyes, requesting to allow them to sell the crackers only this year.
Key words: fireworks –sale-mysore-DCP Prakash Gowda -visit
Key words: fireworks –sale-mysore-DCP Prakash Gowda -visit