ಕೇಂದ್ರ ಸಚಿವರೊಬ್ಬರ ಸೋದರಳಿಯರ ನಡುವೆ ಫೈರಿಂಗ್ : ಓರ್ವ ಸಾವು

ಪಾಟ್ನಾ,ಮಾರ್ಚ್,20,2025 (www.justkannada.in):  ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರ ಸೋದರಳಿಯರ ನಡುವೆ ಗುಂಡಿನ ದಾಳಿ ನಡೆದು, ಓರ್ವ ಸಾವನ್ನಪ್ಪಿರುವ ಘಟನೆ ಬಿಹಾರದ ನವಗಟಿಯಾದಲ್ಲಿ ನಡೆದಿದೆ.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರ ಸಹೋದರಿಯರ ಮಕ್ಕಳಾದ ವಿಶ್ವಜಿತ್ ಹಾಗೂ ಜೈಜಿತ್ ನಡುವೆ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದೆ.  ಗುಂಡಿನ ದಾಳಿಯಲ್ಲಿ ಸಚಿವರ ಓರ್ವ ಸೋದರಳಿಯ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಕುಡಿಯುವ ನೀರಿನ ವಿಚಾರಕ್ಕೆ ಈ ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Firing, between, Union minister, nephews, death,