ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನ: ಆರೋಪಿ ಕಾಲಿಗೆ ಗುಂಡೇಟು

 

ಮೈಸೂರು,ಮಾರ್ಚ್,22,2025 (www.justkannada.in):  ಸ್ಥಳ ಮಹಜರು ವೇಳೆ  ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಕಳೆದ ಒಂದೂವರೆ ತಿಂಗಳ ಹಿಂದೆ ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ದರೋಡೆ ಪ್ರಕರಣದ ಆರೋಪಿ ಆದರ್ಶ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.  ದರೋಡೆಕೋರರು ಹಾಡು ಹಗಲೆ ಕಾರು ಅಡ್ಡಗಟ್ಟಿ ಕಾರಿನ ಜೊತೆ ಹಣ ಎಗರಿಸಿದ್ದರು. ಪ್ರಕರಣ ಸಂಭಂದ ಈಗಾಗಲೇ ನಾಲ್ಕು ಜನರನ್ನು ಜಯಪುರ ಪೋಲಿಸರು ಬಂಧಿಸಿ ಜೈಲಿಗಟ್ಟಿದ್ದರು.

ಇನ್ನು ತಲೆ ತಪ್ಪಿಸಿಕೊಂಡಿದ್ದ ಮೂವರು ಆರೋಪಿಗಳ ಸೆರೆಗೆ ಪೊಲೀಸರು ಬಲೆ ಬೀಸಿದ್ದರು.  ನಿನ್ನೆ ಮಂಜಾನೆ ಕೇರಳಾದಲ್ಲಿ ಉಳಿದ ಮೂವರು ಆರೋಪಿಗಳು ಸೆರೆಸಿಕ್ಕಿದ್ದರು. ನಂತರ ಪೊಲೀಸರು ಆರೋಪಿಗಳೊಡನೆ ರಾತ್ರಿ ಸ್ಥಳ ಮಹಜರಿಗೆ ತೆರಳಿದ್ದರು. ಈ ವೇಳೆ ಅರೋಪಿ ಆದರ್ಶ್ ಮೂತ್ರ ವಿಸರ್ಜನೆ ಮಾಡುತ್ತೇನೆ ಎಂದು ಬಿದ್ದಿದ್ದ ಬಿಯರ್ ಬಾಟಲಿಯಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಎಸ್.ಐ ಕಪಾಳಕ್ಕೆ ಬಾರಿಸಿ ಸಿಬ್ಬಂದಿಗಳನ್ನು ತಳ್ಳಿ ತಪ್ಪಿಸಿಕೊಳ್ಳಲು ಆರೋಪಿ ಆದರ್ಶ್ ಯತ್ನಿಸಿದ್ದಾನೆ.

ಈ ವೇಳೆ ಎಸ್.ಐ ನಿಲ್ಲುವಂತೆ ಕೂಗೂತ್ತ ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ನಿಲ್ಲದ ಕಾರಣ  ಆರೋಪಿ ಕಾಲಿಗೆ ಎಸ್.ಐ ಗುಂಡು ಹಾರಿಸಿದರು.  ಹಲ್ಲೆಗೊಳಗಾದ ಪೊಲೀಸರು ಹಾಗೂ ಆರೋಪಿಯನ್ನು ಕೆ.ಆರ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

Key words: Attempt, escape, attacking, police, firing, Accused, mysore