ದುಬೈ, ಅಕ್ಟೋಬರ್ 11, 2019 (www.justkannada.in): ಭಾರತದ ಜಿ.ಎಸ್.ಲಕ್ಷ್ಮೀ ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಟೂರ್ನಿಗಳಲ್ಲಿ ಮೊದಲ ಮಹಿಳಾ ಮ್ಯಾಚ್ ರೆಫರಿ ಆಗಿ ಆಯ್ಕೆಯಾಗಿದ್ದಾರೆ.
2019ರ ಪುರುಷರ ಐಸಿಸಿ ಟಿ-20 ವಿಶ್ವಕಪ್ ಕ್ವಾಲಿಫೈಯರ್ನ ಲೀಗ್ ಹಂತಕ್ಕೆ ಐಸಿಸಿ ಪಂದ್ಯದ ಅಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ನ್ಯೂಝಿಲ್ಯಾಂಡ್ನ ಮಾಜಿ ನಾಯಕ ಜೆಫ್ ಕ್ರೋವ್ ಹಾಗೂ ಲಕ್ಷ್ಮೀ ಟೂರ್ನಿಯ ಮ್ಯಾಚ್ ರೆಫರಿ ಆಗಿ ನೇಮಕಗೊಂಡಿದ್ದಾರೆ.
ಕ್ರೋವ್ 3 ಐಸಿಸಿ ಟಿ-20 ವಿಶ್ವಕಪ್ ಸಹಿತ 488 ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಐಸಿಸಿ ಟಿ-20 ಅರ್ಹತಾ ಸುತ್ತಿನ ಪಂದ್ಯಗಳು ಯುಎಇನಲ್ಲಿ ಅ.18ರಿಂದ ನ.2ರ ತನಕ ನಡೆಯಲಿದೆ.