ಬೇಕಾಗುವ ಸಾಮಾಗ್ರಿಗಳು :
ಕಿಂಗ್ ಫಿಶ್ ಅಥವಾ ದೊಡ್ಡ ಗಾತ್ರದ ಮೀನು(ಅರ್ಧ ಕೆಜಿ)
ಖಾರದ ಪುಡಿ ಒಂದೂವರೆ ಚಮಚ
ಕಡಲೆ ಹಿಟ್ಟು 100 ಗ್ರಾಂ
ಅರಿಶಿಣ ಪುಡಿ ಅರ್ಧ ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅರ್ಧ ಚಮಚ
ಗರಂ ಮಸಾಲ 1 ಚಮಚ
ಜೀರಿಗೆ ಪುಡಿ ಅರ್ಧ ಚಮಚ
ನಿಂಬೆ ಹಣ್ಣು 1
ಸೋಂಪು 1 ಚಮಚ
ರುಚಿಗೆ ತಕ್ಕ ಉಪ್ಪು (ಬೇಕಿದ್ದರೆ ಅರ್ಧ ಚಮಚ ತಂದೂರಿ ಮಸಾಲವನ್ನು ಸೇರಿಸಬಹುದು)
ಗರಂ ಮಸಾಲೆಗೆ ಬೇಕಾಗುವ ಪದಾರ್ಥಗಳು :
ಲವಂಗ 2
ಏಲಕ್ಕಿ 2
ನಕ್ಷತ್ರ ಮೊಗ್ಗು
ಚಕ್ಕೆ 1 (ಇವನ್ನು ಸ್ವಲ್ಪ ಹುರಿದು ಪುಡಿ ಮಾಡಿ ಇಡಿ)
ತಯಾರಿಸುವ ವಿಧಾನ:
* ಮೀನನ್ನು ಶುದ್ಧ ಮಾಡಿ, ಅದರಲ್ಲಿ ಅರಿಶಿಣ ಪುಡಿ ಮತ್ತು ಉಪ್ಪು ಹಾಕಿ ಮಿಕ್ಸ್ ಮಾಡಿ ಅರ್ಧ ಗಂಟೆ ಇಡಿ.
* ನಂತರ ಕಲೆ ಹಿಟ್ಟು ಕಲೆಸಿ, ಅದಕ್ಕೆ ಗರಂ ಮಸಾಲೆ ಪುಡಿ ಮತ್ತು ಉಳಿದೆಲ್ಲಾ ಮಸಾಲೆ ಪುಡಿ ಮತ್ತು ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ ಮತ್ತೆ ಅರ್ಧ ಅಥವಾ ಒಂದು ಗಂಟೆ ಇಡಿ.
* ನಂತರ ಪ್ಯಾನ್ ಗೆ ಅರ್ಧದಷ್ಟು ಎಣ್ಣೆ ಹಾಕಿ ಅದರಲ್ಲಿ ಮೀನನ್ನು ಹಾಕಿ ಡೀಪ್ ಫ್ರೈ ಮಾಡಿ, ನಿಂಬೆ ಹಣ್ಣಿನ ಜ್ಯೂಸ್ ಹಾಕಿದರೆ ಫಿಶ್ ಕೋಳಿ ವಡಾ ರೆಡಿ.