ಬೆಳಗಾವಿ,ಫೆಬ್ರವರಿ,14,2021(www.justkannada.in): ಮನಸ್ಸು ಮಾಡಿದರೇ 24 ಗಂಟೆಗಳಲ್ಲಿ ಕಾಂಗ್ರೆಸ್ ನ ಐವರು ಶಾಸಕರನ್ನ ರಾಜೀನಾಮೆ ಕೊಡಿಸಿ ಬಿಜೆಪಿಗೆ ಕರೆ ತರ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ಮನಸ್ಸು ಮಾಡಿದರೇ ಕಾಂಗ್ರೆಸ್ ನ ಟಾಪ್ 1 ರಿಂದ 5ರವರೆಗಿನ ಶಾಸಕರನ್ನ ರಾಜೀನಾಮೆ ಕೊಡಿಸಿ ಬಿಜೆಪಿಗೆ ಕರೆ ತರುತ್ತೇನೆ ಅವರ ಹೆಸರು ಕೇಳಿದರೇ ನೀವೇ ಅಚ್ಚರಿ ಪಡುತ್ತೀರಿ ಎಂದರು.

17 ಶಾಸಕರು ಬಿಜೆಪಿಯಲ್ಲಿ ಗಟ್ಟಿಯಾಗಿ ಇರುತ್ತೇವೆ. ಕಾಂಗ್ರೆಸ್ ನಲ್ಲಿ ನಮ್ಮನ್ನ ಮೂಲೆಗೆ ತಳ್ಳಿದ್ದರು. ಸಿದ್ಧರಾಮಯ್ಯ ನಮ್ಮ ನಾಯಕರು. ಈಗಲೂ ಅವರ ಜತೆ ಮಾತನಾಡುತ್ತೇನೆ ಎಂದು ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.
Key words: five- Congress-MLA- BJP-Minister- Ramesh Jarakiholi.