ಬೆಂಗಳೂರು,ಜು,9,2019(www.justkannada.in): ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 13 ಮಂದಿ ಶಾಸಕರ ಪೈಕಿ 8 ಮಂದಿ ಶಾಸಕರ ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.
ಇಂದು ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸ್ಪೀಕರ್ ರಮೇಶ್ ಕುಮಾರ್, ಜುಲೈ 6 ರಂದು ಕಚೇರಿಯಲ್ಲೇ ಇದ್ದೆ. ಅಂದು ಯಾರು ಬರಲಿಲ್ಲ. ನಾನೂ ಹೋದಮೇಲೆ 13 ಮಂದಿ ಶಾಸಕರು ಬಂದು ಕಾರ್ಯದರ್ಶಿಗೆ ರಾಜೀನಾಮೆ ಪತ್ರ ನೀಡಿದ್ದಾರೆ. ಈ 13 ಮಂದಿ ಪೈಕಿ 5 ಶಾಸಕರ ನಾಮಪತ್ರ ಮಾತ್ರ ಕ್ರಮಬದ್ಧವಾಗಿದೆ. ಇಂದು ರೋಷನ್ ಬೇಗ್ ರಾಜೀನಾಮೆ ನೀಡಿದ್ದಾರೆ. ಆನಂದ್ ಸಿಂಗ್ , ಪ್ರತಾಪ್ ಗೌಡ ಪಾಟೀಲ್, ರಾಮಲಿಂಗೆಡ್ಡಿ, ಗೋಪಾಲಯ್ಯ, ನಾರಾಯಣಗೌಡ ರಾಜೀನಾಮೆ ಪತ್ರ ಕ್ರಮಬದ್ಧವಾಗಿದೆ ಉಳಿದವರ ನಾಮಪತ್ರ ಕ್ರಮಬದ್ಧವಾಗಿಲ್ಲ. ಹೀಗಾಗಿ ಇವರಿಗೆ ಸೂಚನಾ ಪತ್ರ ನೀಡಿದ್ದೇವೆ ಎಂದು ತಿಳಿಸಿದರು.
ಜುಲೈ 12 ರಂದು ಆನಂದ್ ಸಿಂಗ್, ನಾರಾಯಣಗೌಡ ವಿಚಾರಣೆಗೆ ಕರೆದಿದ್ದೇನೆ. ಜುಲೈ 15ರಂದು ರಾಮಲಿಂಗರೆಡ್ಡಿ ಅವರಿಗೆ ವೈಯಕ್ತಿಕ ವಿಚಾರಣೆಗೆ ಕರೆದಿದ್ದೇನೆ. 13 ಮಂದಿ ಶಾಸಕರು ನಾಮಪತ್ರ ಅಂಗೀಕರಿಸುವಂತೆ ಸೂಚಿಸಲು ರಾಜ್ಯಪಾಲರಿಗೆ ಮನವಿ ಮಾಡಿದ್ದರು. ರಾಜೀನಾಮೆ ಅಂಗೀಕಾರದ ಕ್ರಮಕ್ಕೆ ರಾಜ್ಯಪಾಲರು ಶಿಫಾರಸ್ಸು ಮಾಡಿ ಪತ್ರ ಬರೆದಿದ್ದಾರೆ. ನಾನು ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದೇನೆ ಎಂದರು.
ಕಾಂಗ್ರೆಸ್ ನಿಂದ ದೂರು ಬಂದಿದೆ. ರಮೇಶ್ ಜಾರಕಿಹೊಳಿ ಸೇರಿ ಮೂವರ ವಿರುದ್ದ ಕ್ರಮ ಕೈಗೊಳ್ಳುವಂತೆ ಸಿಎಲ್ ಪಿ ಸಭೆ ಬಳಿಕ ಸಿಎಲ್ ಪಿ ನಾಯಕ ಸಿದ್ದರಾಮುಯ್ಯ ದೂರು ನೀಡಿದ್ದಾರೆ. ಹಾಗೆಯೇ ರಾಜೀನಾಮೆ ಕುರಿತು ಸಾರ್ವಜನಿಕ ದೂರು ಬಂದಿದ್ದು ಅವುಗಳನ್ನ ಆಲಿಸುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದರು.
Key words: Five legislators -Resignation – orderly-Speaker Ramesh Kumar.