ಒಂದೇ ಕುಟುಂಬದ ಐವರು ಆತ್ಮಹತ್ಯೆ: ತಡವಾಗಿ ಬೆಳಕಿಗೆ ಬಂದ ಪ್ರಕರಣ.

ಬೆಂಗಳೂರು,ಸೆಪ್ಟಂಬರ್,18,2021(www.justkannada.in): ಕೌಟುಂಬಿಕ ಕಲಹ ಹಿನ್ನೆಲೆ  ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ತಿಗಳರಪಾಳ್ಯದ ಬ್ಯಾಡರಹಳ್ಳಿಯ 4ನೇ ಕ್ರಾಸ್ ನಲ್ಲಿ  ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಭಾರತಿ(50), ಮಧು ಸಾಗರ್(27),  ಸಿಂಚನಾ(33) ಮತ್ತು ಸಿಂಧುರಾಣಿ(30) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದವರು.

ಕೌಟುಂಬಿಕ ಕಲಹ ಹಿನ್ನೆಲೆ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಒಂಬತ್ತು ತಿಂಗಳ ಮಗು ಕೂಡಾ ಸಾವನ್ನಪ್ಪಿದೆ. 3 ವರ್ಷದ ಮಗುವೊಂದು ಪವಾಡಸದೃಶ್ಯ ರೀತಿಯಲ್ಲಿ ಬದುಕುಳಿದಿದೆ ಎನ್ನಲಾಗಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ಮನೆ ಯಜಮಾನ ಶಂಕರ್ ಮನೆಯಲ್ಲಿರಲಿಲ್ಲ. ಮನೆಗೆ ಫೋನ್ ಮಾಡಿದ್ದ ವೇಳೆ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಮನೆಯ ಬಳಿ ನಿನ್ನೆ ಬಂದು ಮನೆಬಾಗಿಲ ಬಡಿದಿದ್ದಾರೆ. ಆದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ  ಶಂಕರ್ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪೊಲೀಸರು ಬಂದು ಮನೆ ಬಾಗಿಲು ಒಡೆದು ನೋಡಿದಾಗ 5 ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. 3 ವರ್ಷದ ಮಗು ಶವಗಳ ನಡುವೆ  ಬದುಕುಳಿದಿದೆ. ಶಂಕರ್ ಸಪ್ಟೆಂಬರ್ 12ರಂದು  ಮನೆಯವರ ಜೊತೆ ಜಗಳವಾಡಿ ಹೊರಹೋಗಿದ್ದರು ಎನ್ನಲಾಗಿದೆ. ಮನೆಯಲ್ಲಿ ನಿತ್ಯ ಜಗಳ, ಮನಸ್ತಾಪ ನಡೆಯುತ್ತಿತ್ತು. ಇದರಿಂದ ನೊಂದು ಶಂಕರ್ ಪತ್ನಿ, ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಈ ಕುರಿತು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Key words: Five -suicides – same family-bangalore

ENGLISH SUMMARY…

Five members of the same family commits suicide: Incident comes to light lately
Bengaluru, September 18, 2021 (www.justkannada.in): A regretful incident where five members of the same family who committed suicide due to a family dispute has come to light in Bengaluru lately.
The incident is report from 4th Cross, Byadarahalli, in Tigalarapaly, in Bengaluru and the deceased are identified as Bharati (50), Madhusagar (27), Sinchana (33) and Sindhurani (3). All these have hanged themselves.
A family dispute is said to be the reason behind this sorrowful incident. A nine-month-old baby has also lost its life in the incident. Another child which is three-year-old has miraculously escaped.
It is said that the house owner Shankar was not at home when the incident took place. He called home and as he didn’t receive any response he came to the house and started knocking the door. As he didn’t get any response he grew anxious and called the police.
When the police arrived and broke opened the door of the house, bodies of all the five persons were found to be in a decomposed state. However, the 3-year-old baby was found alive amidst the dead bodies. According to the police Shankar had left the house on September 12 after quarrelling with the family members. They used to have fight almost every day at home. It is suspected may be Shakar’s wife and children have committed suicide dejected over this. The Byadarahalli police have registered a case.
Keywords: Five of family/ commit suicide/ Bengaluru/ incident/ late