ಬೆಂಗಳೂರು,ಜೂ,2,2020(www.justkannada.in): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಆನ್ಲೈನ್ ಮೂಲಕ ಮೆಕ್ಕೆಜೋಳ ಮತ್ತು ಹೂವು ಬೆಳೆದ ರೈತರಿಗೆ 5ಸಾವಿರ ಪರಿಹಾರ ಧನದ ಮೊದಲ ಕಂತು ಬಿಡುಗಡೆ ಮಾಡಿದರು. ಆನ್ಲೈನ್ ಮೂಲಕ ಪರಿಹಾರ ಯೋಜನೆಗೆ ಚಾಲನೆ ನೀಡಿದರು. 666 ಕೋಟಿ ರೂ.ಬಿಡುಗಡೆ ಮಾಡಿದರು.
ಇದೇ ಸಂದರ್ಭದಲ್ಲಿ ಕೃಷಿ ಸಚಿವರಾದ ಬಿ.ಸಿ.ಪಾಟೀಲರು ಸಚಿವರಾಗಿ ನೂರು ದಿನ ಪೂರೈಸಿದ ಹಿನ್ನಲೆಯಲ್ಲಿ ಕೃಷ್ಣಾದಲ್ಲಿಂದು ಮುಖ್ಯಮಂತ್ರಿಗಳು ” ದಿನ ನೂರು-ಸಾಧನೆ ಹಲವಾರು” ಶೀರ್ಷಿಕೆಯುಳ್ಳ ಕಿರುಹೊತ್ತಿಗೆ ಬಿಡುಗಡೆ ಮಾಡಿದರು.
ನೂರು ದಿನಗಳಲ್ಲಿ ಕೃಷಿ ಸಚಿವರು ಮಾಡಿದ ಸಾಧನೆಗಳು ಇಲಾಖೆಯ ಪ್ರಗತಿ, ಕೋವಿಡ್ ಸಂದರ್ಭದಲ್ಲಿ ತೆಗೆದುಕೊಂಡ ತೀರ್ಮಾನಗಳು ಸೇರಿದಂತೆ ನೂರು ದಿನಗಳಲ್ಲಿನಸಾಧನೆಗಳನ್ನು ಹೊತ್ತ ಕಿರುಹೊತ್ತಿಗೆ ” ದಿನನೂರು- ಸಾಧನೆ ಹಲವಾರು” ಇದಾಗಿದೆ.
Key words: five thosend- Relief Fund- farmers.- CM BS Yeddyurappa- released