ಬೆಂಗಳೂರು,ಮಾರ್ಚ್,08,2021(www.justkannada.in) : ಜಿಎಸ್ ಟಿ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ಮುಂದಿನ ಐದು ವರ್ಷದಲ್ಲಿ ರಾಜ್ಯದಲ್ಲಿ 5000 ಕೋಟಿ ಬಂಡವಾಳ ನಿರೀಕ್ಷೆಯಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಪ್ರತಿ ತಾಲೂಕಿನಲ್ಲೂ 10 ಕಿರು ಉದ್ದಿಮೆ ಆರಂಭ
ಕೋರಮಂಗಲ ರಾಜಕಾಲುವೆ ಅಭಿವೃದ್ದಿಗೆ 169 ಕೋಟಿ ರೂ., ಸಾರಿಗೆ ಇಲಾಖೆಯ 66 ಕಚೇರಿಗಳ ಡಿಜಿಟಲೀಕರಣ, ಅಡಿಕೆ ಪರ್ಯಾಯ ಬೆಳೆ ಪ್ರೋತ್ಸಾಹಕ್ಕೆ 25 ಕೋಟಿ ರೂ., ಹಸಿರೆಲೆ ಗೊಬ್ಬರಕ್ಕೆ 10 ಕೋಟಿ ರೂ., ಪ್ರತಿ ತಾಲೂಕಿನಲ್ಲೂ 10 ಕಿರು ಉದ್ದಿಮೆ ಆರಂಭಿಸುವುದಾಗಿ ಹೇಳಿದರು.

ಬಾದಾಮಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ. ಶ್ರವಣ ಬೆಳಗೋಳಕ್ಕೆ 50 ಕೋಟಿ ರೂ. ಹಾಗೂ ಯಾಂತ್ರೀಕೃತ ದೋಣಿಗಳಿಗೆ ತೆರಿಗೆ ರಹಿತ ಡೀಸೆಲ್ ಕುರಿತಂತೆ ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದಾರೆ.
key words : five years-state-5 thousand-crores-Portfolio-Expectation-B.S.Y.