ಮೈಸೂರು,ಜುಲೈ,3,2023(www.justkannada.in): ಕಬ್ಬು ಮತ್ತು ಭತ್ತ ಸೇರಿದಂತೆ ರೈತರು ಬೆಳೆದ ಬೆಳೆಗಳಿಗೆ ಎಂ ಎಸ್ ಪಿ ದರ ನಿಗದಿ ಮಾಡಬೇಕು. ಪಡಿತರ ವ್ಯವಸ್ಥೆಗೆ ರಾಜ್ಯದ ರೈತರು ಬೆಳೆದ ಭತ್ತವನ್ನೇ ಖರೀದಿ ಮಾಡಬೇಕು. ಭತ್ತಕ್ಕೆ ನಿಗದಿತ ಬೆಲೆ ನಿರ್ಧಾರ ಮಾಡಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.
ಮುಂಬರುವ ರಾಜ್ಯ ಬಜೆಟ್ ಕುರಿತು ಮೈಸೂರಿನಲ್ಲಿ ಮಾತನಾಡಿದ ಬಡಗಲಪುರ ನಾಗೇಂದ್ರ , ಸರ್ಕಾರ ತಮ್ಮ ಪ್ರಣಾಳಿಕೆಯಲ್ಲಿ ರೈತರಿಗೆ 5 ಲಕ್ಷದವರೆಗೆ 0% ಬಡ್ಡಿಯಲ್ಲಿ ಕೊಡುತ್ತೇವೆ ಎಂದಿದ್ದಾರೆ. ಸ್ಕೇಲ್ ಆಫ್ ಫೈನಾನ್ಸ್ ಹೆಚ್ಚಿಸಬೇಕು. ಕೋಆಪರೇಟಿವ್ ಬ್ಯಾಂಕುಗಳ ಮೂಲಕ ಸರ್ಕಾರ ಹೆಚ್ಚು ಹೆಚ್ಚು ಸಾಲ ಕೊಡಬೇಕು. ಕೃಷಿಯಲ್ಲಿ ತೊಡಗಿಸಿಕೊಂಡ ಯುವ ಕೃಷಿಕರಿಗೆ 10 ಲಕ್ಷದಷ್ಟು ಸಾಲವನ್ನ 0% ನಲ್ಲಿ ಕೊಡಬೇಕು ಎಂದು ಒತ್ತಾಯಿಸಿದರು.
ರೈತರು ಇವತ್ತು ಸಂಕಷ್ಟದಲ್ಲಿದ್ದಾರೆ. ಸಾಲಮುಕ್ತಗೊಳಿಸುವ, ಕೆಲ ರೈತಪರ ಯೋಜನೆಗಳ ಜಾರಿಗೆ ತರುವ ಕೃಷಿ ಪೂರಕ ನೀತಿಗಳ ಜಾರಿಗೆ ತರಬೇಕು. ಜೊತೆಗೆ ಗೋಹತ್ಯೆ ನಿಷೇಧ ಕಾಯಿದೆ ವಾಪಸ್ ಪಡೆಯಬೇಕು. ಎಪಿಎಂಸಿ ಕಾಯಿದೆ ತಿದ್ದುಪಡಿಯಾಗಬೇಕು ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ಹೇಳಿದರು.
Key words: Fixed- price – paddy- Badgalpur Nagendra