ಬೆಂಗಳೂರು,ಸೆಪ್ಟಂಬರ್,7,2022(www.justkannada.in): ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದ್ದು ಈ ಹಿನ್ನೆಲೆಯಲ್ಲಿ ಇಂದಿನಿಂದ ಸೆಪ್ಟಂಬರ್ 9ರವರೆಗೆ ಕೇಂದ್ರ ತಂಡ ನೆರೆ ಹಾನಿ ವೀಕ್ಷಣೆ ಮಾಡಿಲಿದೆ.
ಮೂರು ತಂಡಗಳಾಗಿ ಕೇಂದ್ರ ತಂಡ ನೆರೆಹಾನಿ ಪರಿಶೀಲನೆ ನಡೆಸಲಿದೆ. ಮೊದಲ ತಂಡ ಚಿತ್ರದುರ್ಗ ಚಿಕ್ಕಮಗಳೂರು, ಹಾಸನದಲ್ಲಿ ಎರಡನೇ ತಂಡ ಬೀದರ್ ಕಲ್ಬರ್ಗಿ, ಯಾದಗಿರಿಯಲ್ಲಿ ಮೂರನೇ ತಂಡ ಧಾರವಾಡ, ಗದಗ ಹಾವೇರಿಯಲ್ಲಿ ಮಳೆ ಹಾನಿ ವೀಕ್ಷಣೆ ಮಾಡಲಿದೆ.
ಆಗಸ್ಟ್ ನಲ್ಲಿ ಸುರಿದ ಮಳೆಯ ಬಗ್ಗೆ ತಂಡ ಅಧ್ಯಯನ ಮಾಡುತ್ತಿದ್ದು, ಈಗಾಗಲೇ ಆಗಸ್ಟ್ನಲ್ಲಿ ಸುರಿದ ಮಳೆಯಿಂದಾಗಿ ಉಂಟಾಗಿರುವ 11 ಸಾವಿರ ಕೋಟಿ ನಷ್ಟದ ಬಗ್ಗೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಮನವಿ ಹಿನ್ನೆಲೆಯಲ್ಲಿ ಅಧ್ಯಯನಕ್ಕೆ ತಂಡ ಆಗಮಿಸಿದೆ.
Key words: flood-damage-central team – state