ಬೆಂಗಳೂರು, ಅಕ್ಟೋಬರ್,17,2020(www.justkannada.in): ರಾಜ್ಯ ಸರ್ಕಾರಕ್ಕೆ ಜನರ ಕಷ್ಟಕ್ಕಿಂತ ಚುನಾವಣೆಯೇ ಮುಖ್ಯವಾಗಿದೆ. ನಾವು ಎಷ್ಟೇ ಎಚ್ಚರಿಸಿದರೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ. ಇದು ದಪ್ಪ ಚರ್ಮದ ಸರ್ಕಾರ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಉತ್ತರ ಕರ್ನಾಟಕದಲ್ಲಿ ಅಕ್ಟೋಬರ್ 10ರಿಂದ 15ರವರೆಗೆ ಸತತ ಮಳೆಯಾಗಿದೆ. ಈ ವೇಳೆ ಸಚಿವರು ಅಲ್ಲಿ ಇರಬೇಕಿತ್ತು. ಈಗ ಕಂದಾಯ ಸಚಿವರು ಹೋಗಿದ್ದಾರೆ. ನೆರೆ ಪ್ರದೇಶಕ್ಕೆ ಸಿಎಂಬಿಎಸ್ ವೈ ಹೋಗಿಲ್ಲ. ಆಗಸ್ಟ್ ನಲ್ಲಾದ ಪ್ರವಾಹಕ್ಕೆ ಪರಿಹಾರ ನೀಡಿಲ್ಲ. ಕೇಂದ್ರ ಸರ್ಕಾರ ಪರಿಹಾರ ನೀಡಲ್ಲ ರಾಜ್ಯದಿಂದಲೂ ಒತ್ತಡ ಹಾಕಿಲ್ಲ ಎಂದು ಕಿಡಿಕಾರಿದರು.
ನಾವು ಎಷ್ಟೇ ಎಚ್ಚರಿಸಿದ್ರೂ, ಅವರು ಎಚ್ಚರವಾಗಲ್ಲ. ನಮ್ಮ ಸಲಹೆಗಳನ್ನೂ ಅವರು ಕೇಳಲ್ಲ. ಪ್ರವಾಹದಿಂದ ತತ್ತರಿಸಿರುವ ಜನರ ನೆರವಿಗೆ ಸರ್ಕಾರ ಧಾವಿಸಿಲ್ಲ. ಇಲ್ಲಿ ನೆರೆಯಲ್ಲಿ ಜನ ಸಿಲುಕಿ ಒದ್ದಾಡುತ್ತಿದ್ದರೇ ಅಲ್ಲಿ ಚುನಾವಣೆ ರ್ಯಾಲಿ ಮಾಡಿಕೊಂಡು ಕುಳಿತಿದ್ದಾರೆ. ಇದು ದಪ್ಪ ಚರ್ಮದ ಸರ್ಕಾರ ಎಂದು ಸಿದ್ಧರಾಮಯ್ಯ ಹರಿಹಾಯ್ದರು.
ಕೇಂದ್ರ ಸರ್ಕಾರದ ಬಳಿ ಮಾತನಾಡಲು ಸರ್ಕಾರಕ್ಕೆ ಧಮ್ ಇಲ್ಲ.
ಕೇಂದ್ರ ಸರ್ಕಾರದ ಬಳಿ ಮಾತನಾಡಲು ಸರ್ಕಾರಕ್ಕೆ ಧಮ್ ಇಲ್ಲ. ರಾಜ್ಯದ 25 ಸಂಸದರಿಗೆ ಧಮ್ ಇಲ್ಲ. ಕೇಂದ್ರ ನಾಯಕರ ಮುಂದೆ ಹೋಗಿ ಕೈ ಕಟ್ಟಿ ನಿಲ್ಲುತ್ತಾರೆ. ನಮಗೆ ಕೊಡಬೇಕಾದ ನೆರವು ಕೇಳು ಇವರಿಗೆ ಧಮ್ ಇಲ್ಲ ಎಂದು ಸಿದ್ಧರಾಮಯ್ಯ ಲೇವಡಿ ಮಾಡಿದರು.
Key words: flood-government-not-response- Former CM Siddaramaiah -outrage