ಬೆಂಗಳೂರು,ಸೆ,9,2019(www.justkannada.in): ಸಿಎಂ ಭರವಸೆ ನೀಡಿದ್ದಾರೆ. ಮನೆ ಇತ್ತು ಅಂತ ದಾಖಲೆ ಇದ್ರೆ ಸಾಕು ಅವರಿಗೆ ಪರಿಹಾರ ಕೊಡಲಾಗುತ್ತದೆ ಎಂದು ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್ ಕುಮಾರ್ ಹೆಗ್ಡೆ ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯ ಸಂಸತ್ ಸದಸ್ಯ ಅನಂತಕುಮಾರ ಹೆಗಡೆ ಹಾಗೂ ಶಾಸಕರುಗಳ ನಿಯೋಗವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಉತ್ತರ ಕನ್ನಡ ಜಿಲ್ಲೆಯ ನೆರೆ ಹಾವಳಿ ಮತ್ತು ಇತರ ಸಮಸ್ಯೆಗಳ ಪರಿಹಾರಕ್ಕಾಗಿ ಮನವಿ ಸಲ್ಲಿಸಿತು
ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್ ಕುಮಾರ್ ಹೆಗ್ಡೆ ಮತ್ತು ಜಿಲ್ಲಾ ಬಿಜೆಪಿ ಶಾಸಕರು ಭೇಟಿ ಮಾಡಿ ಚರ್ಚಸಿದರು. ಸಿಎಂ ಭೇಟಿ ಬಳಿಕ ಮಾತನಾಡಿದ ಸಂಸದ ಅನಂತ್ ಕುಮಾರ್ ಹೆಗಡೆ, ನೆರೆಯಲ್ಲಿ ಕೊಚ್ಚಿ ಹೋದವರ ಬಳಿ ಮನೆಗಳ ದಾಖಲೆಗಳಿಲ್ಲ. ಕೆಲ ಮನೆಗಳ ದಾಖಲೆಗಳು ನೆರೆಯಿಂದ ನಾಶವಾಗಿವೆ. ಅರಣ್ಯ ಜಮೀನಿನಲ್ಲಿ ಅತಿಕ್ರಮಣ ಮಾಡಿ ಕೃಷಿ ಮಾಡ್ತಾ ಇದ್ರು ಕೆಲವರು ಅಂತಹವರ ಮನೆಗಳ ದಾಖಲೆಗಳೂ ನಾಶವಾಗಿದೆ. ಆದ್ರೆ ಸಿಎಂ ಭರವಸೆ ನೀಡಿದ್ದಾರೆ. ಮನೆ ಇತ್ತು ಅಂತ ದಾಖಲೆ ಇದ್ರೆ ಸಾಕು ಅವರಿಗೆ ಪರಿಹಾರ ಕೊಡಲಾಗುತ್ತದೆ . ನದಿ ದಂಡೆಯಲ್ಲಿ ಮನೆ ಕಟ್ಟಿರುವ ಮೀನುಗಾರರಿಗೆ 1+1ಮನೆಗಳನ್ನು ಕುಮಟಾದ ಹಳ್ಳಿಗಳಲ್ಲಿ ಕಟ್ಟಿ ಕೊಡಲಾಗುತ್ತದೆ.ಇ ದರ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸುತ್ತದೆ. ಇದನ್ನು ಮಾದರಿಯಾಗಿ ಮಾಡಲಾಗುತ್ತದೆ. ಇದು ಸಕ್ಸಸ್ ಆದ್ರೆ ರಾಜ್ಯದ ಎಲ್ಲ ಕಡೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಕೇಂದ್ರದಿಂದ ನೆರೆ ಪರಿಹಾರ ವಿಳಂಬ ಎಂಬ ಪ್ರತಿಪಕ್ಷಗಳ ಟೀಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಅನಂತ್ ಕುಮಾರ್ ಹೆಗ್ಡೆ, ಪ್ರತಿಪಕ್ಷಗಳ ಟೀಕೆಗೆ ನಾನು ಉತ್ತರ ಕೊಡಲ್ಲ. ನೆರೆಯಿಂದ ಎಷ್ಟು ನಷ್ಟವಾಗಿದೆ ಎಂಬ ಬಗ್ಗೆ ರಾಜ್ಯ ಸರ್ಕಾರ ವರದಿಯನ್ನ ಕೊಟ್ಟಿದೆ. ಕೇಂದ್ರ ಸರ್ಕಾರದ ಬಗ್ಗೆ ನಮಗೆ ವಿಶ್ವಾಸ ಇದೆ. ಕೇಂದ್ರದಿಂದ ಎನ್ ಡಿ ಆರೆಫ್ ಪ್ರಕಾರ ಪರಿಹಾರ ಕೊಡಲಿದೆ. ಎರಡು ಬಾರಿ ನೆರೆ ಬಂದಿದೆ ಇದರ ಅಂತಿಮ ವರದಿಯನ್ನ ರಾಜ್ಯ ಸರ್ಕಾರ ನೀಡಬೇಕಿದೆ. ಕಳೆದ ಐದು ವರ್ಷಗಳಲ್ಲಿ ಕೇಂದ್ರದಿಂದ ಸಾಕಷ್ಟು ನೆರೆ/ಬರ ಪರಿಹಾರ ಬಂದಿದೆ. ಈಗ ಪರಿಹಾರ ಪ್ರಕ್ರಿಯೆಯಲ್ಲಿ ಕೊಂಚ ವಿಳಂಬ ಆಗಿರೋದು ಹೌದು.ಆದ್ರೆ ಕೇಂದ್ರ ಸರ್ಕಾರ ಧನಾತ್ಮಕವಾಗಿ ಸ್ಪಂದಿಸುತ್ತಿದೆ ಎಂದು ಹೇಳಿದರು.
ಸುಮಾರು ವರ್ಷದಿಂದ ಹಾಲಕ್ಕಿ ಒಕ್ಕಲಿಗರು ಸಿಎಂ ಮುಂದೆ ಅನುದಾನದ ಬೇಡಿಕೆ ಇಟ್ಡಿದ್ರು . ಒಂದು ಕೋಟಿ ರೂ ಅನುದಾನ ಅವರಿಗೆ ನೀಡಲು ಸಿಎಂ ಸ್ಪಂದಿಸಿದ್ದಾರೆ. ಅದಕ್ಕಾಗಿ ಸಿಎಂ ಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಅನಂತ್ ಕುಮಾರ್ ಹೆಗಡೆ ತಿಳಿಸಿದರು.
Key words: Flood relief- MP- Anant Kumar Hegde-meet-CM BSY.