ಮೈಸೂರು,ಏಪ್ರಿಲ್,11,2025 (www.justkannada.in): ಮೈಸೂರಿನಲ್ಲಿ ಹಿನಕಲ್ ಫ್ಲೈ ಓವರ್ ಬಳಿಕ ಇದೀಗ ಎರಡನೇ ಫ್ಲೈ ಓವರ್ ಬ್ರಿಡ್ಜ್ ತಲೆ ಎತ್ತುತ್ತಿದೆ.
ಹೌದು ಮೈಸೂರು ನಂಜನಗೂಡು ರಿಂಗ್ ರಸ್ತೆ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 10 ಕೋಟಿ ರೂಗಳ ವೆಚ್ಚದಲ್ಲಿ ಈ ಫ್ಲೈ ಓವರ್ ನಿರ್ಮಾಣ ಕಾರ್ಯ ನಡೆಸಲಾಗುತ್ತಿದ್ದು ಬೆಂಗಳೂರು ಮೂಲದ ಗುತ್ತಿಗೆದಾರನಿಗೆ ಎನ್ ಎಚ್ ಆರ್ ಎ ಟೆಂಡರ್ ಕೊಟ್ಟಿದೆ.
ಕೊಳ್ಳೆಗಾಲದಿಂದ ಕೇರಳಾದ ಕ್ಯಾಲಿಕಟ್ ಗೆ ಸಂಪರ್ಕವಿರುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಈ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದು, ಅಪಘಾತ ವಲಯವಾದ ಆರ್ ಎಂಸಿ ಯಾರ್ಡ್ ಬಳಿ ವಾಹನ ದಟ್ಟನೆ ತಗ್ಗಿಸಲು ಈ ಹೊಸ ಯೋಜನೆ ಮಾಡಲಾಗುತ್ತಿದೆ.
ಅಪಘಾತ ಪ್ರಕರಣ ಹೆಚ್ಚಾದ ಬೆನ್ನಲ್ಲೇ ಮೇಲ್ಸೇತುವೆ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರ ಮುಂದಾಗಿದ್ದು, ಫ್ಲೈಓವರ್ ನಿರ್ಮಾಣಕ್ಕೆ ಗುತ್ತಿಗೆದಾರರಿಗೆ 18 ತಿಂಗಳ ಕಾಲಾವಕಾಶ ಕೊಟ್ಟಿದೆ. 2026 ನೇ ವರ್ಷಾಂತ್ಯಕ್ಕೆ ಈ ಮೇಲ್ಸೇತುವೆ ಲೋಕಾರ್ಪಣೆಯಾಗುವ ಸಾಧ್ಯತೆ ಇದೆ.
Key words: Another, Fly Over Bridge, Mysore