ಮೈಸೂರು,ಜನವರಿ,25,2021(www.justkannada.in): ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮೈಸೂರು ಅಭಿವೃದ್ಧಿಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಇಲ್ಲಿಗೆ ಏನೆಲ್ಲ ಬೇಕು ಎಂಬ ಬಗ್ಗೆ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ಪಟ್ಟಿ ಸಿದ್ಧಪಡಿಸುತ್ತೇವೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಮೈಸೂರಿನಲ್ಲಿ ಶ್ರೀಗಂಧದ ವಸ್ತುಸಂಗ್ರಹಾಲಯಯನ್ನು ಲೋಕಾರ್ಪಣೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಮೈಸೂರಿಗೆ ಏನೇನು ಬೇಕು ಎಂಬ ಬಗ್ಗೆ ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್ ಹಾಗೂ ಎಲ್. ನಾಗೇಂದ್ರ ಅವರು ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಎಲ್ಲವನ್ನೂ ಚರ್ಚಿಸಿ ನಾವು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ. ಅಲ್ಲದೆ, ಕೋವಿಡ್ ಕಾರಣಕ್ಕೆ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಗಮನಹರಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೈಸೂರಿನಲ್ಲಿ ಆಸ್ಪತ್ರೆಗಳಿಗೆ ಅಗತ್ಯವಾಗಿ ಬೇಕಾದ ವೆಂಟಿಲೇಟರ್ ಸೇರಿದಂತೆ ಇನ್ನಿತರ ಕಡೆ ಅಭಿವೃದ್ಧಿಗಾಗಿ ಸಂಸದರು, ಶಾಸಕರೊಂದಿಗೆ ಸಭೆ ಸೇರಿ ಪಟ್ಟಿ ಸಿದ್ಧಪಡಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಸಚಿವ ಸೋಮಶೇಖರ್ ತಿಳಿಸಿದರು.
ರೈತರ ಪ್ರತಿಭಟನೆಗೆ ಸರ್ಕಾರದ ವಿರೋಧವಿಲ್ಲ…..
ರೈತರು ಪ್ರತಿಭಟನೆ ಮಾಡಲು ಸರ್ಕಾರದಿಂದ ಯಾವುದೇ ವಿರೋಧವಿಲ್ಲ. ಆದರೆ, ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಓಡಿಸಲು ಆಗುವುದಿಲ್ಲ. ಹಾಗೆ ಮಾಡಿದರೆ ಸಂಚಾರ ಸ್ಥಗಿತಗೊಳ್ಳುತ್ತದೆ. ಜನಸಾಮಾನ್ಯರಿಗೆ ರೈತರು ತೊಂದರೆ ಕೊಡುವ ಕೆಲಸ ಮಾಡುವುದಿಲ್ಲ ಎಂದು ನಾವು ನಂಬಿದ್ದೇವೆ. ಇನ್ನು ದೆಹಲಿಯಲ್ಲಿ ಅನುಮತಿ ಕೊಟ್ಟಿದ್ದರೂ ಸಹ ಅಲ್ಲಿಯ ರಸ್ತೆ ಬೇರೆ, ಬೆಂಗಳೂರಿನ ರಸ್ತೆಯ ಚಿತ್ರಣವೇ ಬೇರೆ. ಇಲ್ಲಿ ಒಮ್ಮೆಗೆ ಸಾವಿರಾರು ಟ್ರ್ಯಾಕ್ಟರ್ ಗಳು ಬಂದರೆ ಎಲ್ಲವೂ ಸ್ತಬ್ಧವಾಗಲಿದೆ. ಹೀಗಾಗಿ ರೈತರು ಸಹಕರಿಸಲಿ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ENGLISH SUMMARY…
I will remind the CM to give stress on development of Mysuru in this budget: Minister S.T. Somashekar
Mysuru, Jan. 25, 2021 (www.justkannada.in): “Keeping in mind the financial condition of the State, the State Government will decide on the overall development of Mysuru in this budget. We will prepare a list of what is required?, for the development of the cultural capital, with the elected representatives,” opined Mysuru District In-charge Minister S.T. Somashekar.
He inaugurated the Sandalwood Museum in Mysuru today. In his address to the press persons after the inaugural function, the Minister explained that Mysuru and Kodagu District MP Pratap Simha, MLAs S.A. Ramadas, and L. Nagendra has prepared a list of essentials for the development of Mysuru. “We will discuss everything in detail and bring it to the notice of the Hon’ble Chief Minister. Due to the Covid pandemic, we have to observe the financial condition of the government and then decide,” he said.
In his reply to the farmers’ rally in Bengaluru on Republic Day, he said that the government was not against it and expressed his displeasure that it would cause trouble to the people and requested the farmers to cooperate.
Keywords: Mysuru District In-charge Minister S.T. Somashekar/ overall development of Mysuru/ State budget/ Chief Minister
Key words: focus -Mysore development – budget- CM bs yeddyurappa – Minister S T Somashekhar.