ಬೆಂಗಳೂರು, ಫೆ.೨೨, ೨೦೨೪ : ಟ್ರಾಫಿಕ್, ಶಬ್ಧ ಮಾಲಿನ್ಯ ಮತ್ತು ಕಾನೂನು ಸುವ್ಯವಸ್ಥೆ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಫ್ರೇಜರ್ ಟೌನ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ಎಫ್‌ಟಿಆರ್‌ಡಬ್ಲ್ಯೂಎ), ಹಾಜಿ ಸರ್ ಇಸ್ಮಾಯಿಲ್ ಸೇಟ್ (ಎಚ್‌ಎಸ್‌ಐಎಸ್) ಸಮುದಾಯ ಅಭಿವೃದ್ಧಿ ಟ್ರಸ್ಟ್ ಮತ್ತು ವಿವಿಧ ಮಸೀದಿ ಸಮಿತಿಗಳು ಫ್ರೇಜರ್ ಟೌನ್‌ನಲ್ಲಿ ರಂಜಾನ್ ಹಬ್ಬದ ಆಹಾರ ಮೇಳಕ್ಕೆ ಸಾಮೂಹಿಕವಾಗಿ ವಿರೋಧ ವ್ಯಕ್ತಪಡಿಸಿವೆ.
ರಿಯಾಯತಿ ಮಾರಾಟ @ ಅಮೆಜಾನ್ : https://amzn.to/4a1SRqz
ಎಫ್‌ಟಿಆರ್‌ಡಬ್ಲ್ಯುಎ ಅಧ್ಯಕ್ಷ ಖೈಸರ್ ಅಹಮದ್ ಮಾತನಾಡಿ, ಮೇಳದ ವಿರುದ್ಧ ಸಹಿ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ ಮತ್ತು ವಾರ್ಡ್‌ನ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಜಿ ಕಾರ್ಪೊರೇಟರ್ ಎಆರ್ ಜಾಕೀರ್ ಅವರನ್ನು ಸಂಪರ್ಕಿಸಲಾಗಿದೆ. ಬಳಿಕ ಶಾಸಕ ಎಸಿ ಶ್ರೀನಿವಾಸ್ ಅವರಿಗೆ ರಂಜಾನ್ ಆಹಾರ ಮೇಳಕ್ಕೆ ಅವಕಾಶ ನೀಡದಂತೆ ಮನವಿ ಸಲ್ಲಿಸಲಾಯಿತು ಎಂದರು.
“ರಂಜಾನ್ ಉಪವಾಸ, ಪ್ರಾರ್ಥನೆ, ಭಕ್ತಿ ಮತ್ತು ದಾನದ ತಿಂಗಳು, ಆದರೆ ಮೇಳ ಆಯೋಜಿಸುವ ಮೂಲಕ ತಪ್ಪು ಸಂದೇಶ ಕಳುಹಿಸಿದಂತಾಗುತ್ತದೆ. ಉಪವಾಸದ ತಿಂಗಳನ್ನು ಹಬ್ಬದ ತಿಂಗಳು ಎಂದು ಬಿಂಬಿಸಲಾಗುತ್ತಿದೆ ಎಂದು ಅಹ್ಮದ್ ಹೇಳಿದರು.
ದೂರದಿಂದ ಮೇಳಕೆ ಬರುವ ವಾಹನ ಸವಾರರು, ಸ್ಥಳೀಯ ನಿವಾಸದ ಗೇಟ್‌ಗಳ ಮುಂದೆ ವಾಹನ ಪಾರ್ಕಿಂಗ್ ಮಾಡುತ್ತಾರೆ. ಆಗ ನೋ ಪಾರ್ಕಿಂಗ್ ಬೋರ್ಡ್ ಮೂಲಕ ಪ್ರವೇಶ ನಿರ್ಬಂಧಿಸಲು ಮುಂದಾಗುತ್ತಾರೆ. ಇದರಿಂದ ವಾಹನ ಸವಾರರು “ಫುಟ್‌ಪಾತ್‌ಗಳು ಮತ್ತು ರಸ್ತೆಗಳನ್ನು ಅತಿಕ್ರಮಿಸಿ ವಾಹನ ನಿಲುಗಡೆ ಮಾಡುತ್ತಾರೇ. ಇದರಿಂದಾಗಿ ನಿಧಾನ ಸಂಚಾರ, ಶಬ್ಧ ಮತ್ತು ವಾಯು ಮಾಲಿನ್ಯ ಉಂಟಾಗುತ್ತದೆ.
ರಂಜಾನ್ ಮಾಸದಲ್ಲಿ ಆಹಾರ ಮೇಳದಿಂದಾಗಿ ನಿವಾಸಿಗಳು ಶಾಂತಿ ಕಳೆದುಕೊಳ್ಳುವಂತಾಗುತ್ತದೆ. ಜನರು ಬಂದರು, ಅಂಗಡಿಗಳನ್ನು ಹಾಕಿದರು, ಹಣ ಮಾಡಿದರು, ಆದರೆ ನಿವಾಸಿಗಳು ಮತ್ತು ಸ್ಥಳೀಯ ಸಮುದಾಯವು ತೊಂದರೆ ಅನುಭವಿಸುತ್ತದೆ.
ಆದ್ದರಿಂದ ಈ ರಂಜಾನ್‌ನಿಂದ ಇಂತಹ ಆಹಾರ ಮೇಳವನ್ನು ನಿಲ್ಲಿಸಲು ನಿರ್ಧರಿಸಲಾಗಿದೆ ಎಂದು ಜಾಕೀರ್ ಹೇಳಿದರು, ಶಾಸಕರೂ ಸಹ ಫ್ರೇಜರ್ ಟೌನ್ ನಿವಾಸಿಗಳ ಕಾಳಜಿಯನ್ನು ಪರಿಹರಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಈ ಹಿಂದೆ ರಂಜಾನ್ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆಗಳು, ಮಾದಕ ದ್ರವ್ಯಗಳ ಹಾವಳಿ, ಸಂಚಾರ ದಟ್ಟಣೆ, ಹೊರಗಿನವರು ಬಂದು ಪ್ರದೇಶದ ಚಿತ್ರಣವನ್ನು ಹಾಳು ಮಾಡುತ್ತಾರೆ ಎಂದು ನಿವಾಸಿಗಳು ದೂರಿದ್ದಾರೆ, ಆದ್ದರಿಂದ ಅವರು ಫ್ರೇಜರ್ ಟೌನ್‌ನಲ್ಲಿ ಅಂತಹ ಯಾವುದೇ ಆಹಾರ ಮೇಳಕ್ಕೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ. ಈ ಬಾರಿ ಮೇಳ ನಿಲ್ಲಿಸಲು ಎಲ್ಲರೂ ಒಗ್ಗೂಡಿದ್ದಾರೆ’ ಎಂದು ಫಜಲ್ ಹೇಳಿದರು.
ಕೃಪೆ : ಇಂಡಿಯ್ ಎಕ್ಸ್ ಪ್ರೆಸ್
key words : food ̲ festival ̲ ramjan ̲ bangalore ̲ opposed