ಬೆಂಗಳೂರು,ನವೆಂಬರ್,18,2020(www.justkannada.in): ಇಲ್ಲಿರುವ ಮರಾಠಿಗರು ಸಹ ನಮ್ಮ ಕನ್ನಡಿಗರೇ. ಅವರ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ. ಹೀಗಾಗಿ ಡಿಸೆಂಬರ್ 5 ರಂದು ಬಂದ್ ಮಾಡುವ ಅಗತ್ಯವಿಲ್ಲ. ಒಂದು ವೇಳೆ ಬಲವಂತದಿಂದ ಬಂದ್ ಮಾಡಿದರೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಡಿಸೆಂಬರ್ 5 ರಂದು ಬಂದ್ ಮಾಡುವ ಅಗತ್ಯವಿಲ್ಲ. ಹೀಗಾಗಿ ಯಾರೂ ಕೂಡ ಕರ್ನಾಟಕ ಬಂದ್ ಗೆ ಕರೆ ನೀಡಬಾರದು. ಬಲವಂತದಿಂದ ಬಂದ್ ಮಾಡಿದರೇ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು ನವೆಂಬರ್ 27ರೊಳಗೆ ಪ್ರಾಧಿಕಾರ ರಚನೆ ನಿರ್ಧಾರ ಹಿಂಪಡೆಯದಿದ್ದರೇ ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿವೆ.
English summary….
CM BSY warns action against those who force for bundh on Dec. 5
Bengaluru, Nov. 18, 2020 (www.justkannada.in): Responding to several pro-kannada and other organisations who have called for a Karnataka bundh on December 5 following the State Govt.s orders to form Maratha Development Authority, Chief Minister B.S. Yedyurappa has warned to initiate action against those who force to observe bundh.
Several Pro-Kannada organisations have warned the State Government to observe a state wide bundh on December 5, if the government doesn’t withdraw its orders on forming the Maratha Development Authority.
Key words: Forced – bandh Dec 5- action-CM BS Yeddyurappa -Warning.