ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ಕೇಸ್ ಗೆ ಟ್ವಿಸ್ಟ್ ..! ಏನದು..?

ಕೊಪ್ಪಳ,ಮಾರ್ಚ್,10,2025 (www.justkannada.in):  ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸಣಾಪುರ ಬಳಿಯ ತುಂಗಭದ್ರ ಎಡದಂಡೆ ಕಾಲುವೆ ಬಳಿ ಇಸ್ರೇಲ್ ಮಹಿಳೆ ಸೇರಿ ಇಬ್ಬರ ಮಹಿಳೆಯರ ಮೇಲೆ ಮೂವರು ದುಷ್ಕರ್ಮಿಗಳಿಂದ  ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದೆ.

ಮೂವರು ಆರೋಪಿಗಳು ಪೇಟ್ರೋಲ್‌ಗೆ 100 ರೂಪಾಯಿ ಕೊಡಲಿಲ್ಲ‌ ಅಂತಾ ಹೇಳಿ  ಇಬ್ಬರು ಮಹಿಳೆಯರ‌ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು,  ಪ್ರವಾಸಿಗರು ಬೆಚ್ಚಿಬಿದ್ದಿದ್ದಾರೆ. ಪೆಟ್ರೋಲ್‌ಗೆ 100 ರೂ. ಕೊಡಲಿಲ್ಲ ಅಂತಾ ಹೇಳಿ ಇಬ್ಬರು‌ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆನ್ನಲಾಗಿದೆ.

ಪ್ರಕರಣ  ಸಂಬಂಧ 24 ಗಂಟೆಯಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಇದೀಗ ಇಂದು ಮತ್ತೊಬ್ಬ ಆರೋಪಿಯನ್ನ ‌ ತಮಿಳುನಾಡಿನಲ್ಲಿ ಬಂಧಿಸಿದ್ದಾರೆ.

 ಏನಿದು ಘಟನೆ…?

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸಣಾಪುರ ಬಳಿಯ ತುಂಗಭದ್ರ ಎಡದಂಡೆ ಕಾಲುವೆ  ಬಳಿ ಮಾರ್ಚ್ 6 ರ ರಾತ್ರಿ ವೇಳೆ ಸಂಗೀತ ಕೇಳುತ್ತಾ ಕುಳಿತುಕೊಂಡಿದ್ದ ಇಸ್ರೇಲ್ ಮೂಲದ ಮಹಿಳೆ ಮತ್ತು ಹೋಮ್ ಸ್ಟೇ ಮಾಲಕಿ ಮೇಲೆ 3 ಜನರು ಹಲ್ಲೆ ನಡೆಸಿ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಅಲ್ಲದೆ ಈ ವೇಳೆ ಸ್ಥಳದಲ್ಲಿದ್ದ ವಿವಿಧ ರಾಜ್ಯದ ಮೂವರು ಪುರುಷರ ಮೇಲೂ ಹಲ್ಲೆ ಮಾಡಿ ಕಾಲುವೆಗೆ ತಳ್ಳಿದ್ದರು.

ನಂತರ ಓರ್ವ ಪ್ರವಾಸಿಗ ಶವವಾಗಿ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ಪತ್ತೆಯಾಗಿದ್ದರು. ಮೃತರನ್ನು ಒರಿಸ್ಸಾ ಮೂಲದ ಬೀಬಾಷಾ ಎಂದು ಗುರುತಿಸಲಾಗಿದೆ.  ಘಟನೆ ಬಳಿ ಇಬ್ಬರು ಸಂತ್ರಸ್ತ ಮಹಿಳೆಯರು ಗಂಗಾವತಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದು, ದೂರಿನ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಕೊಪ್ಪಳ ಪೊಲೀಸರು ನಿನ್ನೆಯೇ ಬಂಧಿಸಿದ್ದರು.

ಗಂಗಾವತಿಯ ಸಾಯಿನಗರದ‌ ನಿವಾಸಿಗಳಾಗಿದ್ದು ಮಲ್ಲೇಶ್ ಅಲಿಯಾಸ್ ಹಂಡಿಮಲ್ಲು ಹಾಗೂ ಸಾಯಿಚೇತನ್ ಬಂಧಿತ ಆರೋಪಿಗಳು . ಇನ್ನೂ ತಲೆಮರಿಸಿಕೊಂಡಿದ್ದ  ಮೂರನೇ ಆರೋಪಿಯನ್ನು ಪೊಲೀಸರು ಕಾರ್ಯಚರಣೆ ನೆಡಸಿ ತಮಿಳುನಾಡಿನಲ್ಲಿ  ಬಂಧಿಸಿದ್ದಾರೆ.

ಈ ಕುರಿತು ಇಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಮಾಹಿತಿ ನೀಡಿದ್ದು, ಮಾರ್ಚ 6 ರಂದು ನಾಲ್ಕು ಜನ ಪ್ರವಾಸಿಗರು ತುಂಗಾ ಭದ್ರ ನದಿ ಬಳಿರೋ ಇರೋ ಹೋಂ ಸ್ಟೇ ನಲ್ಲಿ ಬಾಡಿಗೆಗೆ ಇರೋದಕ್ಕೆ ಬಂದಿರ್ತಾರೆ. ಹೊಮ್ ಸ್ಟೇ ಮಾಲೀಕರು ತಮಿಳುನಾಡಿವರಾಗಿದ್ದು ಅವರು ಆನೆಗೂಂದಿಯಲ್ಲಿ ಎರಡು ಹೋಮ್ ಸ್ಟೇ ಬಾಡಿಗೆ ಪಡೆದು ವ್ಯಾಪಾರ ನಡೆಸ್ತಿದ್ದಾರೆ. ಬಾಡಿಗೆಗೆ‌ ಒಟ್ಟು ನಾಲ್ಕು ಜನರಿದ್ದು ಅದರಲ್ಲಿ ಇಬ್ಬರು ವಿದೇಶಿಯರು ಮತ್ತು ಇಬ್ಬರು ಭಾರತೀಯರು ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Key words:  twist, foreign woman rape, case,