ಚಾಮರಾಜನಗರ,ಜನವರಿ,22,2025 (www.justkannada.in): ಕಾಡು ಕಾಯುವವನೇ ಆನೆ ದಂತ ಸಾಗಾಟಕ್ಕಿಳಿದು ಇದೀಗ ಬಂಧಿತನಾಗಿದ್ದಾನೆ. ಹೌದು ಆನೆ ದಂತ ಸಾಗಿಸುತ್ತಿದ್ದ ಫಾರೆಸ್ಟ್ ವಾಚರ್ ಸೇರಿ ಇಬ್ಬರನ್ನ ಬಂಧಿಸಲಾಗಿದೆ.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಮೋಳೆ ರಿಂಗ್ ರಸ್ತೆಯಲ್ಲಿ ಘಟನೆ ನಡೆದಿದೆ. ವಾಚರ್ ಚಂದ್ರಶೇಖರ್ ಹಾಗೂ ಬಸವರಾಜ್ ಬಂಧಿತರು. ತನ್ನ ಸಂಬಂಧಿಕರೊಂದಿಗೆ ಫಾರೆಸ್ಟ್ ವಾಚರ್ ಬೈಕ್ ನಲ್ಲಿ ಆನೆ ದಂತ ಸಾಗಿಸುತ್ತಿದ್ದ.
ಈ ವೇಳೆ ಸಂಚಾರಿ ಅರಣ್ಯ ದಳ ಕಾರ್ಯಚರಣೆ ನಡೆಸಿದ್ದು, ಮಾಲು ಸಮೇತ ಖದೀಮರು ಸಿಕ್ಕಿ ಬಿದ್ದಿದ್ದಾರೆ. ಮತ್ತೊಬ್ಬ ಆರೋಪಿ ಪುಟ್ಟಸ್ವಾಮಿ ಪರಾರಿಯಾಗಿದ್ದಾನೆ.
Key words: forest watcher, arrested, transporting, elephant ivory