ಮೈಸೂರು,ಡಿಸೆಂಬರ್,30,2020(www.justkannada.in) : ಅರಣ್ಯ ಇಲಾಖೆ ಆವರಣದಲ್ಲಿ ಬೆಳೆದಿದ್ದ ಶ್ರೀಗಂಧದ ಮರ ಕಳವು ಮಾಡಲಾಗಿದೆ.
ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ಪಟ್ಟಣದ 1ನೇ ಮುಖ್ಯರಸ್ತೆಯಲ್ಲಿರುವ ಅರಣ್ಯ ಇಲಾಖೆ ಕಾಂಪೌಂಡ್ ಒಳಗೆ ಬೆಳೆದಿದ್ದ ಶ್ರೀಗಂಧದ ಮರವನ್ನು ಕಳವು ಮಾಡಲಾಗಿದೆ.

ಮರ ಕತ್ತರಿಸುವ ಯಂತ್ರದ ಸಹಾಯದಿಂದ ಗಂಧದ ಮರ ಕತ್ತರಿಸಿದ್ದಾರೆ. ಅರಣ್ಯ ಇಲಾಖೆ ವಸತಿ ಗೃಹದ ಬಳಿಯೇ ಕಳ್ಳತನ ಮಾಡಿದ್ದು, ಒಂದು ತಿಂಗಳ ಹಿಂದೆ ಇಲ್ಲೇ ಎರಡು ಗಂಧದ ಮರ ಕಳುವಾಗಿತ್ತು. ಈ ಕುರಿತು ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
key words : Forest-Department-premises-Had-grown-Sandalwood-tree-stolen …!