ಮೈಸೂರು, ಸೆಪ್ಟಂಬರ್,4,2020(www.justkannada.in): ಕೊರೋನಾ ಮಹಾಮಾರಿ ಆರ್ಭಟ ಹಿನ್ನೆಲೆ ಈ ಬಾರಿ ಸರಳ ಮತ್ತು ಸಾಂಪ್ರದಾಯಕ ದಸರಾ ಆಚರಣೆಗೆ ಮುಂದಾಗಿರುವ ಸರ್ಕಾರ ಇದೀಗ ಉನ್ನತ ಮಟ್ಟದ ದಸರಾ ಸಮಿತಿ ರಚನೆ ಮಾಡಿದೆ.
ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ದಸರಾ ಸಮಿತಿ ರಚನೆ ಮಾಡಲಾಗಿದ್ದು, ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಅಶ್ವತ್ ನಾರಾಯಣ್, ಲಕ್ಷ್ಮಣ್ ಸವದಿ ನೇಮಕ ಮಾಡಲಾಗಿದೆ.
ಇನ್ನು ದಸರಾ ಸಮಿತಿ ಸದಸ್ಯರಾಗಿ ಎಸ್ ಟಿ ಸೋಮಶೇಖರ್, ಬಸವರಾಜ್ ಬೊಮ್ಮಾಯಿ, ಸಿ ಟಿ ರವಿ, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಮೇಯರ್ ತಸ್ನಿಂ, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ. ಮೈಸೂರಿ ಜಿಲ್ಲಾಧಿಕಾರಿ ಶರತ್ ಹಾಗೂ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಹಾಗೂ ಸಂದರುಗಳಾದ ಸುಮಲತಾ ಅಂಬರೀಶ್, ವಿ ಶ್ರೀನಿವಾಸ್ ಪ್ರಸಾದ್, ಪ್ರತಾಪ್ ಸಿಂಹ, ಹಾಗೂ ಮೈಸೂರು ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರುಗಳನ್ನ ನೇಮಕ ಮಾಡಲಾಗಿದೆ.
ಮೈಸೂರು ಜಿಲ್ಲಾಉಸ್ತವಾರಿ ಸಚಿವ ಎಸ್ ಟಿ ಸೋಮಶೇಖರ್ ನೇತೃತ್ವದಲ್ಲಿ ಕಾರ್ಯಕಾರಿಣಿ ಸಮಿತಿ ರಚನೆ ಮಾಡಲಾಗಿದ್ದು ಸೆಪ್ಟಂಬರ್ 8ಕ್ಕೆ ಹೈಪವರ್ ಕಮಿಟಿ ಮೀಟಿಂಗ್ ಫಿಕ್ಸ್ ಆಗಿದೆ. ಹೈಪವರ್ ಕಮಿಟಿ ಮೀಟಿಂಗ್ ಗೆ ಮೈಸೂರು ಭಾಗದ ಶಾಸಕ ಸಂಸದರಿಗೆ ಆಹ್ವಾನ ನೀಡಲಾಗಿದೆ.
Key words: Formation – high level- Dasara Committee- CM-Hyper Committee Meeting -Fix -Sec.8.