ದೇಗುಲಗಳ ತೆರವಿಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರೋಧ.

ಮೈಸೂರು,ಸೆಪ್ಟಂಬರ್,17,2021(www.justkannada.in): ರಾಜ್ಯ ಸರ್ಕಾರ ಅನಧಿಕೃತ ದೇವಾಲಯಗಳ ತೆರವಿಗೆ ಮುಂದಾಗಿ ಇದಕ್ಕೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ದೇಗುಲಗಳ ತೆರವು ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತಗೊಳಿಸಿದೆ. ಈ ಸಂಬಂಧ ದೇಗುಲಗಳ ತೆರವಿಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಮಾತನಾಡಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ದೇಗುಲಗಳನ್ನ ತೆರವುಗೊಳಿಸಿದ್ದು ಸರಿಯಲ್ಲ. ದೇಗುಲ ತೆರವು ಸ್ಥಗಿತಗೊಳಿಸುವಂತೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ತೆರವಿಗೂ ಮುನ್ನ ಚರ್ಚೆ ಮಾಡಬೇಕಿತ್ತು. ದೇವಾಲಯಗಳನ್ನ ತೆರವುಗೊಳಿಸದಂತೆ ಆಗ್ರಹಿಸುತ್ತೇನೆ ಎಂದಿದ್ದಾರೆ.

ಇನ್ನು ಬಿವೈ ವಿಜಯೇಂದ್ರ ಸ್ಪರ್ಧೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿಎಸ್ ವೈ, ವಿಜಯೇಂದ್ರ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಮುಂದಿನ ಬಾರಿ ಎಲ್ಲಿ ಸ್ಪರ್ಧಿಸಬೇಕು ಎಂದು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ವಿಜಯೇಂದ್ರ ರಾಜ್ಯಾದ್ಯಂತ ಪ್ರವಾಸ ಮಾಡುತ್ತಾರೆ ಎಂದರು.

ಪ್ರಧಾನಿ ಮೋದಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಜಗತ್ತೇ ಅಚ್ಚರಿ ಪಡುವಂತೆ ಕೆಲಸ ಮಾಡುತ್ತಿದ್ದಾರೆ ಎಂದು ಬಿಎಸ್ ವೈ ಮೆಚ್ಚುಗೆ ವ್ಯಕ್ತಪಡಿಸಿದರು.

Key words: Former CM-BS Yeddyurappa- oppose-clearance – temples

ENGLISH SUMMARY…

Former CM Yediyurappa opposes eviction of temples
Mysuru, September 17, 2021 (www.justkannada.in): Former Chief Minister Yediyurappa has expressed his displeasure over the eviction of temples by the State Government.
He visited the Suttur Srimath today and sought the blessings of the JSS Math seer Sri Shivarathri Deshikendra Mahaswamiji. Speaking on the occasion, he said it is not correct for the State Government to evict temples. He has asked the Chief Minister to take measures to stop the eviction. “They should have discussed before taking action. I request them not to evict the temples,” he said.
In his reply to his son Vijendra’s possibilities of contesting in the byelections, he said Vijendra would not contest. “The high command will decide from where he should contest next time. However, Vijendra will tour the state,” he informed.
Keywords: Former CM/ Yediyurappa/ Suttur Math/ Suttur Seer/ temple eviction/ opposes