ಬೆಂಗಳೂರು, ಜುಲೈ 12, 2022 (www.justkannada.in): ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಸೋಮವಾರ ಕೋವಿಡ್-19 ಸೋಂಕು ಉಂಟಾಗಿರುವುದು ದೃಢಪಟ್ಟಿದ್ದು, ಅವರು ಪ್ರಸ್ತುತ ಐಸೊಲೇಷನ್ ನಲ್ಲಿರುವುದಾಗಿ ತಿಳಿದು ಬಂದಿದೆ.
“ಜ್ವರ ಮತ್ತು ಮೈಕೈನೋವಿನಿಂದ ಬಳಲುತ್ತಿದ್ದ ಕುಮಾರಸ್ವಾಮಿ ಅವರು ಕೋವಿಡ್ ತಪಾಸಣೆಗೆ ಒಳಗಾಗಿದ್ದು, ತಪಾಸಣೆಯ ಫಲಿತಾಂಶ ಪಾಸಿಟಿವ್ ಬಂದಿದೆ. ವೈದ್ಯರು ನನಗೆ ಮನೆಯಲ್ಲೇ ಐಸೊಲೇಷನ್ ನಲ್ಲಿದ್ದು, ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದಾರೆ,” ಎಂದು ಜೆಡಿಎಸ್ನ ಎರಡನೇ ಮುಖ್ಯಸ್ಥರು ತಮ್ಮ ಒಂದು ಟ್ವೀಟ್ ನಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.
ವೈದ್ಯರ ಸಲಹೆಯ ಮೇರೆಗೆ ಮುಂದಿನ 10 ದಿನಗಳ ಕಾಲ ಮನೆಯಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ. “ತಮ್ಮನ್ನು ಹತ್ತಿರದಿಂದ ಭೇಟಿ ಮಾಡಿದ ಎಲ್ಲರೂ ತಪಾಸಣೆ ಮಾಡಿಸಿಕೊಳ್ಳುವಂತೆ ಅವರು ಎಲ್ಲರನ್ನೂ ಕೋರಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ತಮ್ಮೊಂದಿಗೆ ಸಂಪರ್ಕದಲ್ಲಿದ್ದಂತಹ ಎಲ್ಲಿರಗೂ ಸಹ ತಪ್ಪದೇ ಕೋವಿಡ್ ತಪಾಸಣೆ ಮಾಡಿಸಿಕೊಳ್ಳುವಂತೆ ಕೋರಿದ್ದಾರೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Former CM -H.D. Kumaraswamy – Covid positive