ಬೆಂಗಳೂರು,ಜುಲೈ,15,2021(www.justkannada.in): ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ಸಪ್ಲೇಯರ್ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ದೂರು ನೀಡಿರುವ ವಿಚಾರ ಕುರಿತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಇದು ಮತ್ತೊಂದು ರೀತಿ ತಿರುವು ಪಡೆಯಲಿದೆ. ಈ ಬಗ್ಗೆ ಸರ್ಕಾರ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಿ. ಸಾರ್ವಜನಿಕ ಜೀವನದಲ್ಲಿವವರು ಅವರೇ ತಿಳಿದುಕೊಳ್ಳಬೇಕು. ಜನರ ಜತೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನ ಅವರೇ ತಿಳಿದುಕೊಳ್ಳಬೇಕು ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
Key words: Former CM- HD Kumaraswamy- Actor -Darshan -assaulting -supplier