ಬೆಂಗಳೂರು,ಜನವರಿ,18,2022(www.justkannada.in): ಮೇಕೆದಾಟು ಯೋಜನೆ ಜಾರಿಗೆ ಕಾಂಗ್ರೆಸ್ ಹಮ್ಮಿಕೊಂಡಿದ್ಧ ಪಾದಯಾತ್ರೆ ಬಗ್ಗೆ ಮಾಜಿ ಸಿಎಂ ಹೆಚ್.ಡಿಕೆ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಈ ಕುರಿತು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಪಾದಯಾತ್ರೆ ಹೆಸರಲ್ಲಿ ಜಾತ್ರೆ ನಡೆಯಿತು. ಈಗ ಎಲ್ಲರಿಗೂ ಅದೇ ರೂಡಿ ಆಯ್ತು. ಮಹದಾಯಿ ಹೋರಾಟಗಾರರ ವೇಳೆ ಕಾಂಗ್ರೆಸ್ ದೌರ್ಜನ್ಯ ನಡೆಸಿತ್ತು. ಈಗ ಮೇಕೆದಾಟುನಲ್ಲಿ ಎಚ್ಚೆತ್ತುಕೊಂಡಿದೆ. ಯಮನೂರಿನಲ್ಲಿ ದೌರ್ಜನ್ಯ ಎಸಗಿತ್ತು ಈಗ ನಮ್ಮ ನೀರು ನಮ್ಮ ಹಕ್ಕು ಅಂತಾ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಜನರ ಹಿತದೃಷ್ಠಿಯಿಂದ ಜಲಧಾರೆ ಯಾತ್ರೆ ಮುಂದೂಡಿಕೆ ಮಾಡಲಾಗಿದೆ. ಕೊರೋನಾ ಕಂಟ್ರೋಲ್ ಬರುವವರೆಗೂ ಯಾತ್ರೆ ಮಾಡಲ್ಲ. ಸರ್ಕಾರದಿಂದ ನೀತಿ ನಿಯಮಗಳನ್ನ ಸರಿಪಡಿಸಲು ಆಗಲ್ಲ. ಈಗ ನಮ್ಮ ಜವಾಬ್ದಾರಿ ಮುಖ್ಯ. ಇನ್ನೊಂದು ವರ್ಷ ಕಳೆದರೇ ಚುನಾವಣೆ ಹತ್ತಿರವಾಗುತ್ತದೆ. ನಿಯಮ ಉಲ್ಲಂಘಿಸಿದರೇ ಜನರೇ ಕೇಳುತ್ತಾರೆ. ದೇವರ ದಯೆಯಿಂದ 3ನೇ ಅಲೆಯಲ್ಲಿ ದೊಡ್ಡ ರೀತಿಯಲ್ಲಿ ತೊಂದರೆ ಆಗಿಲ್ಲ ಎಂದು ಹೆಚ್.ಡಿಕೆ ತಿಳಿಸಿದರು.
Key words: Former CM-HD Kumaraswamy again -Congress -padayatra