ಬೆಂಗಳೂರು,ನ,23,2019(www.justkannada.in): ಅವರ ತೀಟೆಗಳಿಗೆ, ಅವರು ಹಣ ಮಾಡೋಕೆ ನಾನು ಸಹಕಾರ ಕೊಡ್ಲಿಲ್ಲ ಅಂತಾ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಅನರ್ಹ ಶಾಸಕರ ವಿರುದ್ದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಮಾಧ್ಯಮಗಳ ಜತೆ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಸಿಎಂ ಆಗಿದ್ದಾಗ ಕುಮಾರಸ್ವಾಮಿ ಕೈಗೆ ಸಿಕ್ತಿರಿಲಿಲ್ಲ, ತಾಜ್ ಲಿ ಇರ್ತಿದ್ರು ಎಂದು ಹೇಳಿದ್ದಾರೆ. ಅಭಿವೃದ್ಧಿಗೆ ಕುಮಾರಸ್ವಾಮಿ ಹಣ ಕೊಡ್ಲಿಲ್ಲ ಎಂದು ಅನರ್ಹ ಶಾಸಕರು ಹೇಳ್ತಾರೆ. ಯಾರ್ಯಾರಿಗೆ ಎಷ್ಟೆಷ್ಟು ಅನುದಾನ ನೀಡಿದ್ದೇನೆ ಅನ್ನೊ ದಾಖಲೆ ಇದೆ. ಆ ದಾಖಲೆಯನ್ನ ಜನರ ಮುಂದೆ ಇಡ್ತೇನೆ ಎಂದು ಹೇಳಿದರು.
ನಗರೋತ್ಥನ ಯೋಜನೆಯಲ್ಲಿ ಎಷ್ಟೆಷ್ಟು ಅನುದಾನ ಕೊಟ್ಟಿದ್ದೇನೆ ಅನ್ನೊದು ಗೊತ್ತಿದೆ. ನಾವು ಕೊಟ್ಟಿರೋದಕ್ಕೆ ಯಡಿಯೂರಪ್ಪನವರು ಆದೇಶ ಮಾಡಿದ್ದಾರೆ. ಆದರೆ ಅನರ್ಹ ಶಾಸಕರು ಅಪಪ್ರಚಾರ ಮಾಡ್ತಿದ್ದಾರೆ. ಅವರ ತೀಟೆಗಳಿಗೆ, ಅವರು ಹಣ ಮಾಡೋಕೆ ನಾನು ಸಹಕಾರ ಕೊಡ್ಲಿಲ್ಲ ಅಂತಾ ಬೆನ್ನಿಗೆ ಚೂರಿ ಹಾಕಿದ್ದಾರೆ. ಬಿಜೆಪಿ ಶಾಸಕರೇ ಕುಮಾರಸ್ವಾಮಿ ಸಿಎಂ ಆಗಿದ್ರೆ ಚೆನ್ನಾಗಿರ್ತಿತ್ತು ಅಂತಾ ಹೇಳ್ತಾರೆ. ಬೇಕಾದ್ರೆ ಆಫ್ ದಿ ರೆಕಾರ್ಡ್ ಹೋಗಿ ಕೆಳ್ಕೊಳ್ಳಿ ಎಂದು ಹೆಚ್.ಡಿ ಕುಮಾರಸ್ವಾಮಿ ಕುಟುಕಿದರು.
ಯಶವಂತಪುರ ಕ್ಷೇತ್ರಕ್ಕೆ419 ಕೋಟಿ ರೂ ಅನುದಾನ ಕೊಟ್ಟಿದ್ದೇನೆ. ಅವರ ಅಭಿವೃದ್ಧಿಗೆ ಅನುದಾನ ಕೊಟ್ಟಿಲ್ಲ, ಅವರ ಕಾನೂನು ಬಾಹಿರ ಚಟುವಟಿಕೆಗಳಿಗೆ ಬೆಂಬಲ ಕೊಟ್ಟಿಲ್ಲ ಅಷ್ಟೇ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
Key words: former CM- HD Kumaraswamy -against -Disqualified MLAs