ಬೆಂಗಳೂರು,ನ,2,2019(www.justkannada.in): ಜನಗಳಿಗೆ ಬರೀ ಚುನಾವಣೆ ಘೋಷಿಸುವ ಮೂಲಕ ತೊಂದರೆ ಕೊಡುವುದು ಬೇಡ ಎಂಬ ಉದ್ದೇಶ ದಿಂದ ಬಿಜೆಪಿ ಸರ್ಕಾರ ಬೀಳಿಸುವುದು ಬೇಡ ಎಂಬ ಹೇಳಿಕೆಯನ್ನು ನೀಡಿದ್ದೇನೆ ಹೊರತು ಬಿಜೆಪಿ ಜತೆ ಸಖ್ಯ ಬೆಳಸುವ ಉದ್ದೇಶದಿದ್ದಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನಡೆದ ಮಾಧ್ಯಮ ಸಂವಾದದಲ್ಲಿ ನಡೆದ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಮಹಾರಾಷ್ಟ್ರ ದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಬೇರೆ ಪಕ್ಷಗಳು ಪ್ರಚಾರ ಮಾಡದೇ ಇದ್ದರೂ ಜನಗಳು ಮುಂದೆ ಬಂದು ಮತ ನೀಡಿದ್ದಾರೆ, ಬಿಜೆಪಿ ಯನ್ನು ತಿರಸ್ಕರಿಸಿದ್ದಾರೆ. ಇಂತಹ ಪಕ್ಷದ ಜತೆ ಸಖ್ಯ ಬೆಳೆಸಲು ಸಾಧ್ಯವೇ ಎಂದು ಸ್ಪಷ್ಟಪಡಿಸಿದರು.
ಉತ್ತರ ಕರ್ನಾಟಕದಲ್ಲಿ ಅತೀಯಾದ ನರೆಯಿಂದ ಜನರು ತತ್ತರಿಸಿದ್ದಾರೆ ಸರಿಯಾದ ರೀತಿ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲಗೊಂಡಿದೆ. ಖಜಾನೆಯಲ್ಲಿ ಹಣ ಇಲ್ಲ ಎಂದು ಹೇಳುವ ಮುಖ್ಯಮಂತ್ರಿಗಳು ಕೇಲವು ಅನರ್ಹ ಶಾಸಕರ ಕ್ಷೇತ್ರಗಳಿಗೆ ಬೇಕಾಬಿಟ್ಟಿ ಹಣ ಬಿಡುಗಡೆಗೊಳಿಸುತ್ತಿದ್ದಾರೆ. ಹಾಗಾದರೆ ಖಜಾನೆ ಯಲ್ಲಿ ಹಣ ಇಲ್ಲ ಎಂದು ಹೇಳುವುದೇಕೆ ಎಂದು ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದರು.
ಸಾಲಮನ್ನಾ ಕುರಿತು ಉತ್ತರ ಕರ್ನಾಟಕ ದ ಜನತೆ ತುಂಭಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 15ಲಕ್ಷ ಜನರಿಗೆ ಈ ಯೋಜನೆಯ ಲಾಭ ದೊರೆತಿದೆ. ಈ ಎಲ್ಲ ಜನರು ಉತ್ತಮ ಅಭ್ಯರ್ಥಿಗಳ ನ್ನು ತಂದು ನಿಲ್ಲಿಸಿ ನಾವು ಗೆಲ್ಲಿಸುತ್ತೆವೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಸಿಎಂ ಬಿಎಸ್ ವೈರನ್ನ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಹಗುರವಾಗಿ ತೆಗೆದುಕೊಂಡಿದ್ದಾರೆ…
ಯಡಿಯೂರಪ್ಪ ಅವರನ್ನು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಹಗುರವಾಗಿ ತೆಗೆದುಕೊಂಡಿದ್ದಾರೆ. ಸಿಎಂ ದಿಲ್ಲಿಗೆ ಹೋದರೆ ಅವರನ್ನು ಮಾತನಾಡಿಸುವವರೂ ಇಲ್ಲ. ಇದು ಅವರಿಗೆ ಮಾತ್ರವಲ್ಲ, ಇಡೀ ರಾಜ್ಯದ ಜನರಿಗೆ ಮಾಡಿರುವ ಅವಮಾನ. ಕೇಂದ್ರ ಮತ್ತು ರಾಜ್ಯ ಸರಕಾರದ ನಡುವೆ ಸಮನ್ವಯ ಇಲ್ಲ. ನೆರೆ ಪರಿಹಾರ ವಿಚಾರದಲ್ಲಿ ರಾಜ್ಯಕ್ಕೆ ಬಂದಿರುವ ಅನುದಾನವೇ ಇದಕ್ಕೆ ಸಾಕ್ಷಿ ಎಂದು ಹೆಚ್.ಡಿ ಕುಮಾರಸ್ವಾಮಿ ಹರಿಹಾಯ್ದರು.
ಸಚಿವ ಆರ್.ಅಶೋಕ್ ವಿರುದ್ದ ಕಿಡಿಕಾರಿದ ಹೆಚ್.ಡಿಕೆ, ಇನ್ನು ಕಂದಾಯ ಸಚಿವರು ರಾಜ್ಯದಲ್ಲಿ ಇದ್ದಾರಾ? ಅಂತ ಅನುಮಾನ ಇದೆ. ಇವರ ಎಲ್ಲೆಲ್ಲಿ ಭೇಟಿ ನೀಡಿದ್ದಾರೆ? ಎಷ್ಟು ಸಭೆ ನಡೆಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ? ಯಾರಿಗೂ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದು ಕೇವಲ ಜಾಹೀರಾತಿನ ಸರ್ಕಾರ…
ಮೀನುಗಾರರು ಮತ್ತ ನೇಕಾರರ ಸಾಲ ಕೇವಲ ಜಾಹೀರಾತು ಮೇಲಿದೆ ಅಷ್ಟೇ. ಯಾವುದೇ ಸಾಲ ಈ ತನಕ ಮನ್ನಾ ಮಾಡಿಲ್ಲ. ಇದು ಬರೇ ಜಾಹೀರಾತಿನ ಸರಕಾರ. 100 ದಿನಗಳ ಈ ಸರಕಾರ ಬರೇ ಜಾಹೀರಾತಿ ನೀಡಲಷ್ಟೇ ಸೀಮಿತ ಆಗಿದೆ. ಅಧಿಕಾರಿಗಳು ಮತ್ತು ಸಿಎಂ ನಡುವೆ ಸಮನ್ವಯತೆ ಇಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಮಾಜಿ ಸಿಎಂ ಎಚ್ಡಿಕೆ ಚಾಟಿ ಬೀಸಿದರು.
ದೇಶ ಮತ್ತು ರಾಜ್ಯ ರಾಜಕಾರಣದಲ್ಲಿ ಗೊಂದಲಮಯವಾಗಿದೆ. ಕೇಂದ್ರದಲ್ಲಿ ಸುಭದ್ರ ಸರಕಾರ ಇದ್ದರೂ ಆತಂಕದ ಆರ್ಥಿಕ ಸ್ಥಿತಿ ಇದೆ. ರಾಜ್ಯದಲ್ಲಿ ಅತಿವೃಷ್ಟಿ ತಾರಕಕ್ಕೆ ಏರಿದೆ. ಆದ್ರೆ ಸರಕಾರ ಇದಕ್ಕೆ ತಕ್ಕಂತೆ ವರ್ತನೆ ಮಾಡಲಿಲ್ಲ. ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸಿ ಯಡಿಯೂರಪ್ಪ ಹರಸಾಹಸ ಪಟ್ಟು ಅಧಿಕಾರಕ್ಕೆ ಬಂದ್ರು. ಆಗ ಸುರಿದ ಮಳೆ- ಯಡಿಯೂರಪ್ಪ ಅವರ ಕಾಲ್ಗುಣ ಅಂದ್ರು. ಆದ್ರೆ ಮಳೆ ಜಾಸ್ತಿ ಆಗುತ್ತಿದ್ದಂತೆ ಯಡಿಯೂರಪ್ಪ ಅವರೇ, ದೇವರ ಅವಕೃಪೆಗೆ ನಾವು ಒಳಗಾಗಿದ್ದೇವೆ ಎಂದು ಎಚ್ಡಿಕೆ ವ್ಯಂಗ್ಯವಾಡಿದರು.
ಸಂವಾದ ಕಾರ್ಯಕ್ರಮದಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಿಷ್ಟು…..
ಕೆಲವೇ ದಿನಗಳಲ್ಲಿ ಸರಕಾರ ಅಧಿಕಾರ ಕಳೆದುಕೊಂಡರೂ ಆಶ್ಚರ್ಯ ಇಲ್ಲ ಎಂದು ಬಿಜೆಪಿ ಸಚಿವರೇ ಹೇಳಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಶಿಸ್ತಿನಿಂದ ಹೇಗೆ ಕೆಲಸ ಮಾಡ್ತಾರೆ?. ಸರಕಾರದ ಬಗ್ಗೆ ನಾನು ಸಾಫ್ಟ್ ಕಾರ್ನರ್ ಇರಿಸಿಕೊಂಡಿರುವುದು ಯಾಕೆ ಅಂದ್ರೆ, ನೆರೆ ಪೀಡಿತ ಪ್ರದೇಶದ ಪರಿಸ್ಥಿತಿಯನ್ನು ನಾನು ಪ್ರವಾಸ ಮಾಡಿ ಹತ್ತಿರದಿಂದ ಗಮನಿಸಿದ್ದೇನೆ. ರಾಜಕಾರಣ ಮಾಡಿ ಈ ಸರಕಾರ ಅಸ್ಥಿರ ಮಾಡಲು ಹೊರಟರೆ, ನೆರೆ ಪೀಡಿತರ ಕತೆ ಏನು ಎಂಬುದಷ್ಟೇ ನನ್ನ ಆತಂಕ.
ಫೋನ್ ಟ್ಯಾಪಿಂಗ್ ವಿಚಾರದಲ್ಲಿ, ಐ ಎಂ ಎ ಕೇಸ್ ನಲ್ಲಿ ಕುಮಾರಸ್ವಾಮಿ ಫಿಟ್ ಆಗ್ತಾರೆ ಎಂಬ ಭಯದಲ್ಲಿ ಬಿಜೆಪಿ ಬಗ್ಗೆ ಸಾಫ್ಟ್ ಆಗಿದ್ದಾರೆ ಎನ್ನಾಲಾಗ್ತಿದೆ. ನನ್ನನ್ನ ಏನು ಮಾಡಲು ಸಾಧ್ಯವಿಲ್ಲ. ಈ ಸರ್ಕಾರ ಬಹಳ ದಿನ ಉಳಿಯಲ್ಲ. ನಾನು ಈ ಹಿಂದೆಯೂ ಹೇಳಿದ್ದೇನೆ, ಈಗಲೂ ಹೇಳ್ತೇನೆ. ನಾನು ಬಿಜೆಪಿ ಸರ್ಕಾರ ಬೀಳಿಸಲ್ಲ ಅಂತಾ ಯಾವುದೇ ಸಾಫ್ಟ್ ಕಾರ್ನರ್ ನಿಂದ ಅಲ್ಲ. ಟೀಕೆ ಮಾಡೋದ್ರಿಂದ ಮನರಂಜನೆ ಸಿಗುತ್ತೆ ಅಷ್ಟೇ ಎಂದು ಸಿದ್ಧರಾಮಯ್ಯಗೆ ಟಾಂಗ್ ನೀಡಿದರು.
ಶಿಕಾರಪುರ ಸುತ್ತಮುತ್ತ ಕೆರೆ ತುಂಬಿಸಲು ನಾನು ಸಿಎಂ ಆಗಿದ್ದಾಗ 450 ಕೋಟಿ ರೂ ನೀಡಿದ್ದೆ. ಯಡಿಯೂರಪ್ಪ ಸಿಎಂ ಆಗುತ್ತಿದ್ದಂತೆ ಇದನ್ನು ೮೫೦ ಕೋಟಿಗೆ ಏರಿಕೆ ಮಾಡಿಕೊಂಡರು. ಇದೇ ಇವರ 100 ದಿನದ ಸಾಧನೆ.ನೂರು ದಿನದಲ್ಲಿ ಯಾವ ಇಲಾಖೆಗೆ ಎಷ್ಟು ಹಣ ನೀಡಿದ್ದೀರಿ? ಎಂಧು ಸರಕಾರಕ್ಕೆ ಎಚ್ಡಿಕೆ ಸವಾಲು ಹಾಕಿದರು.
ಚಿಕ್ಕಬಳ್ಳಾಪುರ ದಲ್ಲಿ ಮೆಡಿಕಲ್ ಕಾಲೇಜು ಆಗಬೇಕು ಅಂತಾ ಸಿದ್ದರಾಮಯ್ಯ ಕಾಲದಲ್ಲೇ ಘೋಷಣೆ ಆಗಿತ್ತು.
ಚಿಕ್ಕಬಳ್ಳಾಪುರ ಮತ್ತು ಕನಕಪುರ ಮೆಡಿಕಲ್ ಕಾಲೇಜು ಬಗ್ಗೆ ದೊಡ್ಡ ರಾಜಕಾರಣ ನಡೀತಿದೆ. ಎಲ್ಲಿಗೆ ಕಾಲೇಜು ಕೊಡಬೇಕು ಎಂಬುದಕ್ಕಿಂತ ಇದಕ್ಕೆ ದುಡ್ಡು ಮೀಸಲು ಆಗಿದೆಯಾ? ಎಂಬುದು ಮುಖ್ಯ. ಎಲ್ಲ ಬರೇ ಶಂಕುಸ್ಥಾಪನೆಗೆ ಅಷ್ಟೇ ಸೀಮಿತ ಆಗಿರುವ ಸರಕಾರ ಇದು ಎಂದು ಹೆಚ್.ಡಿ ಕೆ ಟೀಕಿಸಿದರು.
ಚಿಕ್ಕಬಳ್ಳಾಪುರ ದಲ್ಲಿ ಮೆಡಿಕಲ್ ಕಾಲೇಜು ಆಗಬೇಕು ಅಂತಾ ಸಿದ್ದರಾಮಯ್ಯ ಕಾಲದಲ್ಲೇ ಘೋಷಣೆ ಆಗಿತ್ತು. ಆದರೆ ಹಣ ಇಟ್ಟಿರಲಿಲ್ಲ,ಕನಕಪುರಕ್ಕೆ ಕೊಟ್ಟ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಕೊಟ್ಟರು ಅಂತಾ ಡಿಕೆಶಿ ಹೇಳ್ತಾರೆ. ಕನಕಪುರ ಮತ್ತು ಚಿಕ್ಕಬಳ್ಳಾಪುರ ಎರಡಕ್ಕೂ ಮೆಡಿಕಲ್ ಕಾಲೇಜು ಕೊಡಲಿ , ಬೇಡಾ ಅಂದೋರ್ಯಾರು. ಈಗ ಕೇವಲ ಚುನಾವಣಾ ಗಿಮಿಕ್ ಆಗಿ ಚಿಕ್ಕಬಳ್ಳಾಪುರ ದಲ್ಲಿ ಗುದ್ದಲಿ ಪೂಜೆ ಮಾಡಲು ಹೊರಟಿದ್ದಾರೆ. ದುಡ್ಡು ಎಲ್ಲಿಂದ ತರ್ತಾರೆ. ಚುನಾವಣೆ ನಂತರ ಮೆಡಿಕಲ್ ಕಾಲೇಜು ಕೆಲಸ ಮುಂದುವರೆಸ್ತಾರಾ ಇಲ್ಲಾ ನಿಲ್ಲಿಸ್ತಾರಾ.? ಎಂದು ವ್ಯಂಗ್ಯಾತ್ಮಕ ಪ್ರಶ್ನೆ ಹಾಕಿದರು.
ಸಿನಿಮಾ ವಿಚಾರಕ್ಕೆ ಲಂಡನೆ ಹೋಗುತ್ತಿದ್ದೇನೆ…
ಲಂಡನ್ ಗೆ ಮಗನ ಜತೆ ಸಿನಿಮಾ ವಿಚಾರಕ್ಕೆ ಸಂಬಂಧಿಸಿ ಹೋಗುತ್ತಿದ್ದೇನೆ. ಶಾಸಕರನ್ನು ಮಲೇಷ್ಯಾಗೆ ಕರೆದುಕೊಂಡು ಹೋಗುವುದಿಲ್ಲ. ಎಲ್ಲ ಪಕ್ಷದಲ್ಲೂ ಒಂದಷ್ಟು ಅಸಮಾಧಾನ ಇರೋದು ನಿಜ. ನಮ್ಮಲ್ಲೂ ಇರಬಹುದು. ಆದ್ರೆ ಇದು ನಿಯಂತ್ರಣದಲ್ಲಿದೆ. ಶಾಸಕರ ಜತೆ ಗೌಡರು ಕರೆದಿರುವ ಸಭೆಯಲ್ಲಿ ನಾನು ಇರುವುದಿಲ್ಲ. ಲಂಡನ್ ನಿಂದ ನಾನು ವಾಪಸ್ ಬರೋದೇ ನಬೆಂಬರ್ 8 ರಂದು ಎಂದು ಹೇಳಿದರು.
ಜನರಿಗೆ ಒಳ್ಳೆಯದು ಮಾಡುವ ಯಾವ ಕೆಲಸವನ್ನೂ ಈ ತನಕ ಯಡಿಯೂರಪ್ಪ ಸರಕಾರ ಮಾಡಿಲ್ಲ. ಹೀಗಾಗಿ ಬೈ ಎಲೆಕ್ಷನ್ ಮಾತ್ರವಲ್ಲ, ಮಧ್ಯಂತರ ಚುನಾವಣೆ ಬಂದರೂ ಯಾರ ಜತೆಗೂ ಒಪ್ಪಂದ ಮಾಡಿಕೊಳ್ಳಲ್ಲ. ಸ್ವತಂತ್ರವಾಗಿ ಸ್ಪರ್ಧೆ ಮಾಡ್ತೀವಿ. ಪಕ್ಷದ ಶಾಸಕರು ನನ್ನ ವಿರುದ್ದ ಸಿಟ್ಟು ಮಾಡಿಕೊಂಡಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ಚಿಕಿತ್ಸೆ ನೀಡಕ್ಕೆ ರೋಗ ಏನು ಅಂತ ಬಂದು ಹೇಳ್ಕೊಂಡ್ರೆ ತಾನೆ ಗೊತ್ತಾಗೋದು? ಎಂದು ಭಿನ್ನಮತೀಯರ ಬಗ್ಗೆ ಎಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ನಿನ್ನೆ ಯಡಿಯೂರಪ್ಪ ಮಾತನಾಡಿರುವ ಆಡಿಯೊ ವನ್ನು ಅನರ್ಹರ ವಿಚಾರವಾಗಿ ಸುಪ್ರಿಂ ಕೋರ್ಟ್ ನಲ್ಲಿ ನಾವು ನಡೆಸುತ್ತಿರುವ ಕೇಸ್ ಗೆ ಸಲ್ಲಿಕೆ ಮಾಡುತ್ತೇನೆ ಎಂದು ಹೆಚ್.ಡಿಕೆ ತಿಳಿಸಿದರು.
Key words: Former CM- HD Kumaraswamy – BJP government- not fall-Soft Corner -criticism.