ಬೆಂಗಳೂರು,ಅಕ್ಟೋಬರ್,28,2022(www.justkannada.in): ಅಮಾನತುಗೊಂಡ ಇನ್ಸ್ ಪೆಕ್ಟರ್ ನಂದೀಶ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಈ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಒಬ್ಬ ಪೊಲೀಸ್ ಅಧಿಕಾರಿ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಮಾನಸಿಕ ಒತ್ತಡದಿಂದ ಇನ್ಸ್ ಪೆಕ್ಟರ್ ನಂದೀಶ್ ಸಾವನ್ನಪ್ಪಿದ್ದಾರೆ . ನಂದೀಶ್ ಅವರಿಗೆ ಒತ್ತಡ ಇತ್ತು ಎಂದು ಅವರ ಪತ್ನಿ ಹೇಳಿದ್ದಾರೆ. ರಾತ್ರಿ 12 ರಿಂದ 1 ಗಂಟೆ ತನಕ ಬಾರ್ ಓಪನ್ ಮಾಡಲು ಅವಕಾಶ ಕೊಟ್ಟಿರುವ ಆರೋಪದ ಮೇಲೆ ಅವರನ್ನು ಸಸ್ಪೆಂಡ್ ಮಾಡಿದ್ದಾರೆ. ಆ ಪಬ್ ನಲ್ಲಿ ಅವತ್ತು ಯಾರಿದ್ದರು. ಶಾಸಕರ ಬೆಂಬಲಿಗರು ಯಾರು ಇದ್ದರು. ..? ಅದೊಂದೇ ಪಬ್ ಮಾತ್ರನಾ ತೆಗೆದಿದ್ದು..? ಅನಧಿಕೃತವಾಗಿ ಪಬ್, ಕ್ಯಾಸಿನೋ ನಡೆಯುತ್ತಿಲ್ವಾ..? ರಾತ್ರಿ 1 ಗಂಟೆಗೆ ತನಕ ಸರ್ಕಾರವೇ ರೆಸ್ಟೋರೆಂಟ್ ತೆಗೆಯಲು ಅವಕಾಶ ಕೊಡುತ್ತಿದೆ. ಅಲ್ಲಿ ಯಾರು ಪಾರ್ಟಿ ಮಾಡಿದ್ದರು ಎಂದು ಗೊತ್ತಾಗಬೇಕು ಎಂದು ಆಗ್ರಹಿಸಿದರು.
ನಂತರ ನಂದೀಶ್, ಸಸ್ಪೆಂಡ್ ರಿವೋಕ್ ಗೆ ದೊಡ್ಡವರ ಬಳಿ ಹೋಗಿದ್ರು ಅನ್ನೋ ಮಾಹಿತಿ ಇದೆ. ಆ ವೇಳೇ ಅವರು ಮರುನೇಮಕ ಸಾಧ್ಯವಿಲ್ಲ ಎಂದಿದ್ದರು. ಬೇರೆ ಹುದ್ದೆ ಕೊಡುವುದಾಗಿ ಹೇಳಿದ್ರು ಎಂಬ ಮಾಹಿತಿ ತಿಳಿದು ಬಂದಿದೆ. ಆ ಮಾತಿನಿಂದ ನೊಂದು ಸಾವನ್ನಪ್ಪಿದ್ದಾರೆ. ಮಾನಸಿಕವಾಗಿ ನೊಂದು ಅವರಿಗೆ ಹೃದಯಾಘಾತವಾಗಿದೆ.
ಪೊಲೀಸ್ ಅಧಿಕಾರಿ ನಂದೀಶ್ ತಪ್ಪು ಮಾಡಿದ್ದರೆ ತನಿಖೆ ಮಾಡಬೇಕು. ನಾನು ರಸ್ತೆಯಲ್ಲಿ ಹೋಗುವಾಗ ರಾತ್ರಿ ತನಕ ರೆಸ್ಟೋರೆಂಟ್ ನಡೆಸುತ್ತಿರುವುದನ್ನು ನೋಡಿದ್ದೇನೆ. ನೀವೇ ಎಣ್ಣೆ ಕುಡಿಯಿರಿ ಎಂದು ಪ್ರೋತ್ಸಾಹ ಕೊಟ್ಟು ಬಾರ್ ನಿಂದ ಹೊರಗಡೆ ಬಂದ ತಕ್ಷಣ ದಂಡ ಹಾಕುತ್ತೀರಾ. ನಿನ್ನೆ ಹೃದಯಾಘಾತದಿಂದ ಆಗಿರುವುದು ಸಾವು ಅಲ್ಲ, ಸರ್ಕಾರದ ನಡತೆಯಿಂದ ಆಗಿರುವ ಕೊಲೆ. ಇದರ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಮುಂದೆ ಈ ರೀತಿ ಆಗದಂತೆ ಕ್ರಮ ವಹಿಸಿಬೇಕು ಎಂದು ಹೆಚ್.ಡಿಕೆ ಆಗ್ರಹಿಸಿದರು.
Key words: Former CM-HD Kumaraswamy- investigation – death – suspended -inspector