ಮಂಡ್ಯ,ಏಪ್ರಿಲ್,26,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಸಕ್ಕರೆ ನಾಡು ಮಂಡ್ಯದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.
ಮಂಡ್ಯದ ಸಂಜಯ್ ವೃತ್ತದಿಂದ ಮಹಾವೀರ ಥಿಯೇಟರ್ವರೆಗೆ ರೋಡ್ ಶೋ ನಡೆಯಿತು. ನಂತರ ಬಿಜೆಪಿ ಪ್ರಚಾರ ಸಭೆಯಲ್ಲಿ ಯೋಗಿ ಆದಿತ್ಯನಾಥ್ ಗೆ ಬಿಜೆಪಿ ನಾಯಕರು ಸನ್ಮಾನ ಮಾಡಿದರು. ಈ ವೇಳೆ ಸಂಸದೆ ಸುಮಲತಾ ಅಂಬರೀಶ್ ಸಾಥ್ ನೀಡಿದರು.
ಪ್ರಚಾರ ಸಭೆಯಲ್ಲಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಈ ಹಿಂದೆ ಉತ್ತರ ಪ್ರದೇಶ ಗೂಂಡಾ ರಾಜ್ಯ ಎಂದು ಖ್ಯಾತಿಯಾಗಿತ್ತು. ಜನ ತಾವು ಸಂಪಾದಿಸಿದ ಹಣವನ್ನ ರೌಡಿಗಳಿಗೆ ಹಫ್ತಾ ನೀಡಬೇಕಿತ್ತು ಯೋಗಿ ಆದಿತ್ಯನಾಥ್ ಅವರು ಸಿಎಂ ಆಗಿ ಬಂದ ಮೇಲೆ ಈಗ ಸಂಪೂರ್ಣ ಬದಲಾಗಿದೆ. ರೌಡಿಗಳು ಓಡಿ ಹೋಗಿದ್ದಾರೆ. ಉತ್ತರ ಪ್ರದೇಶಸದಲ್ಲಿ ಜನರು ಈಗ ನಿರ್ಭಯವಾಗಿ ಓಡಾಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿದೆ. ಕರ್ನಾಟಕದಲ್ಲಿ ಆ ಸುಧಾರಣೆ ಆಗಬೇಕಿದೆ. ಇದಕ್ಕೆ ಡಬಲ್ ಇಂಜಿನ್ ಸರ್ಕಾರ ಬರಬೇಕು ಎಂದು ಯೋಗಿ ಆದಿತ್ಯನಾಥ್ ಆಡಳಿತವನ್ನ ಹಾಡಿ ಹೊಗಳಿದರು.
ಮಂಢ್ಯದಲ್ಲಿ ಬದಲಾವಣೆ ಸಂದರ್ಭ ಬಂದಿದೆ. ಸಂಸದೆಯಾಗಿದ್ದಾಗ ಸಹಕಾರ ನೀಡಿದ್ದು ಮೋದಿ ಅವರ ಸರ್ಕಾರ. ಒಂದು ವೋಟು ಒಂದು ಕುಟುಂಬ ಮಾತ್ರ ಅಭಿವೃದ್ಧಿಯಾಗಬೇಕಾ. ಒಂದು ಪಕ್ಷ ಅತಂತ್ರವಾಗಬೇಕು ಅಂತಾ ಹೇಳುತ್ತೆ. ಮಂಡ್ಯದಲ್ಲಿ ಬದಲಾವಣೆ ಬೇಕಿದೆ. ಕಳೆದ ಬಾರಿ ಚುನಾವಣೆಯಲ್ಲಿ 7 ಕ್ಕೆ 7 ಶಾಸಕರನ್ನ ಆಯ್ಕೆ ಮಾಡಿದ್ರಿ. ಅವರೆಲ್ಲಾ ಯಾವ ಕೆಲಸ ಮಾಡಿದ್ದಾರೆ ಒಂದನ್ನ ತೋರಿಸಿ. ಯಾರೊ ಕನಸು ಕಾಣುತ್ತಿದ್ದಾರೆ ಅತಂತ್ರ ಪರಿಸ್ಥಿತಿ ಬರಲಿ ಅಂತ. ನಾನೇ ಸಿಎಂ ಆಗಬೇಕು ಅಂತ ಕನಸನ್ನು ಕಾಣುತ್ತಿದ್ದಾರೆ ಎಂದು ಪರೋಕ್ಷವಾಗಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ವಾಗ್ದಾಳಿ ನಡೆಸಿದರು.
Key words: former CM HD Kumaraswamy- MP Sumalatha Ambarish -praises – UP CM -Yogi Adityanath