ಮೈಸೂರು,ಸೆ,12,2019(www.justkannada.in): ಚಂದ್ರಯಾನ ವಿಚಾರದಲ್ಲಿ ಪ್ರಧಾನ ಮಂತ್ರಿ ಪ್ರಚಾರ ಗಿಟ್ಟಿಸಲು ಬಂದ್ರು. ಆದರೆ ಪಾಪ ಅವರು ವಿಫಲವಾದ್ರು. ಅವರ ಕಾಲಗಳಿಗೆಯಿಂದ ವಿಜ್ಞಾನಿಗಳಿಗೂ ಅಪಶಕುನ ಆಗಿದೆ ಅನ್ಸುತ್ತೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ವಿಜ್ಞಾನಿಗಳ ಶ್ರೇಯಸ್ಸನ್ನ ಪ್ರಯೋಜನ ಪಡೆದುಕೊಳ್ಳಲು ಮೋದಿ ಹೋಗಿ ವಿಫಲರಾದ್ರು. ಮೋದಿ ಅವರ ಕಾಲಗಳಿಗೆಯಿಂದ ವಿಜ್ಞಾನಿಗಳಿಗೂ ಅಪಶಕುನ ಆಗಿದೆ ಅನ್ಸುತ್ತೆ ಎನ್ನುವ ಮೂಲಕ ಚಂದ್ರಯಾನ 2 ವಿಫಲವಾಗಿದನ್ನ ಮೋದಿ ಮುಖಕ್ಕೆ ಒರೆಸಿ ಲೇವಡಿ ಮಾಡಿದರು.
ರಾಜ್ಯದಲ್ಲಿ ನೆರೆ ಪರಿಹಾರಕ್ಕೆ 3800 ಕೋಟಿ ಪರಿಹಾರ ಕೇಳಿದ್ವಿ. ಆದ್ರೆ ಕೇಂದ್ರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ಕಂದಾಯ ಸಚಿವರ ಬಳಿ ನೆರೆ ಬಗ್ಗೆ ಮಾಹಿತಿಯೇ ಇಲ್ಲ. ಈ ಕೆಲಸ ನನ್ನ ಅವಧಿಯಲ್ಲಿ ಆಗಿದ್ರೆ ಎಲ್ಲೋಗಿದ್ದೀಯಾ ಕುಮಾರಸ್ವಾಮಿ ಎನ್ನೋವ್ರು ಎಂದು ಕಿಡಿಕಾರಿದರು.
ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ ಹೆಚ್.ಡಿ ಕುಮಾರಸ್ವಾಮಿ, ರಷ್ಯಾದಲ್ಲಿ ಹೋಗಿ 7ಸಾವಿರ ಕೋಟಿ ಹಣ ಪರಿಹಾರ ಕೊಡಲು ಆಗತ್ತೆ. ಆದ್ರೆ ನಮ್ಮ ರಾಜ್ಯದ ಸಮಸ್ಯೆಗಳ ಕಡೆ ಗಮನ ಕೊಡುವ ಕೆಲಸ ಮೋದಿಯಿಂದ ಆಗ್ತಿಲ್ಲ. ಮೋದಿ ಅವರಿಗೆ ರಾಜ್ಯದ ಜನರಿಗೆ ಹಣ ಕೊಡಲು ಟೈಮಿಲ್ಲ. ನೆರೆಗೆ ಪರಿಹಾರ ನೀಡಿಲು ಹಣದ ಕೊರತೆ ಇಲ್ಲ. ಕೇಂದ್ರ ಸರ್ಕಾರದ ಹಣ ಕಾಯುವ ಅವಶ್ಯಕತೆ ಇಲ್ಲ ಎಂದರು.
ನನ್ನನ್ನ ಈ ವಿಚಾರದಲ್ಲಿ ಯಾರು ಟಚ್ ಮಾಡೋಕೆ ಆಗಲ್ಲ….
ಟೆಲಿಪೋನ್ ಕದ್ದಾಲಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ನನ್ನನ್ನ ಈ ವಿಚಾರದಲ್ಲಿ ಯಾರು ಟಚ್ ಮಾಡೋಕೆ ಆಗಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
ಸಿಂಎ ಬಿ ಎಸ್ ವೈಗೆ ಸಚಿವರನ್ನ ಹತೋಟಿಯಲ್ಲಿ ಇಡುವ ಸ್ವತಂತ್ರ ಇಲ್ಲ. ಅನರ್ಹ ಶಾಸಕರ ಬಗ್ಗೆಯೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೆಚ್.ಡಿ.ಕೆ ಹೇಳಿದರು.
Key words: Former CM- HD Kumaraswamy- Prime Minister Modi-responsible – Chandrayana-2-Failed