ಮಂಡ್ಯ,ಜುಲೈ,8,2021(www.justkannada.in): ಕೆಆರ್ ಎಸ್ ಡ್ಯಾಂನಲ್ಲಿ ಬಿರುಕು ಮತ್ತು ಸುತ್ತಾಮುತ್ತಾ ಅಕ್ರಮ ಗಣಿಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಮೂರ್ನಾಲ್ಕು ದಿನಗಳಿಂದಲೂ ಸಂಸದೆ ಸುಮಲತಾ ಅಂಬರೀಶ್ ಮತ್ತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನಡುವೆ ವಾಕ್ಸಮರ ನಡೆಯುತ್ತಲೇ ಇದೆ.
ಈ ಮಧ್ಯೆ ತಮ್ಮ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ನೀಡಿರುವ ಹೇಳಿಕೆ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸದೆ ಕೈ ಮುಗಿದ ಘಟನೆ ಮಂಡ್ಯ ಜಿಲ್ಲೆ ಕೆಎಂ ದೊಡ್ಡಿಯಲ್ಲಿ ನಡೆದಿದೆ.
ಕೆ.ಎಂ ದೊಡ್ಡಿಯಲ್ಲಿ ಈ ವಿಚಾರವಾಗಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಬೇರೆ ಮಹಿಳೆ ಬಗ್ಗೆ ಬೇಕಾದರೇ ಮಾತನಾಡೋಣ. ಅಂತಹ ವಿಶೇಷ ಮಹಿಳೆ ಬಗ್ಗೆ ಮಾತನಾಡೋದು ಬೇಡ ಎಂದಿದ್ದಾರೆ.
ಅಕ್ರಮ ಗಣಿಗಾರಿಕೆ ವಿಚಾರವಾಗಿ ಗಣಿ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟ ಪಡಿಸಿದ್ದಾರೆ. ಅಕ್ರಮ ಗಣಿಗಾರಿಕೆಯನ್ನ ನಿಷೇಧಿಸಿದ್ದೇವೆಂದು ಹೇಳಿದ್ದಾರೆ. ನಾನು ಸಿಎಂ ಆಗಿದ್ದಾಗ ಅಕ್ರಮ ಗಣಿಗಾರಿಗೆ ಬಂದ್ ಮಾಡಿಸಿದ್ದೆ ನನ್ನ ಅವಧಿಯಲ್ಲಿ ಕೆಆರ್ ಎಸ್ ಸುತ್ತಮುತ್ತ 20 ಕಿಮೀ ಗಣಿಗಾರಿಕೆ ನಿಷೇಧಿಸಿದ್ದೆ. 100 ವರ್ಷ ಆದರೂ ಕೆಆರ್ ಎಸ್ ಏನು ಆಗಲ್ಲ ಎಂದು ಹೆಚ್.ಡಿಕೆ ತಿಳಿಸಿದರು.
ಸುಮಲತಾ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸದೇ ಕೈಮುಗಿದ ಹೆಚ್.ಡಿಕೆ. ಕೆಎಂ ದೊಡ್ಡಿ. ನನ್ನನ್ನ ಫಿನಿಷ್ ಮಾಡುತ್ತೇವೆ ಎಂದು ತಿಳಿದುಕೊಂಡಿದ್ದರೇ ಅದು ಆಗಲ್ಲ. ಮನ್ಮುಲ್, ಮೈಷುಗರ್ ವಿಚಾರದಲ್ಲಿ ಮಂಡ್ಯ ಜನತೆಗೆ ಅನ್ಯಾಯವಾಗಲು ಬಿಡಲ್ಲ ಎಂದರು.
ಅಂಬರೀಶ್ ಬಗ್ಗೆ ಮಾತನಾಡಿದರೇ ಮಣ್ಣಾಗುತ್ತಾರೆ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿಕೆ ಮಣ್ಣಾಗುವುದು ನಾನಲ್ಲ, ಅವರು ಮಣ್ಣಾಗುವುದು ಎಂದು ಕಿಡಿಕಾರಿದರು.
Key words: Former CM- HD kumarasway- not comment – Sumalatha Ambarish’s- statement.