ಮೈಸೂರು,ನ,16,2019(www.justkannada.in): ಯಾರೂ ಏನೇ ಹೇಳಲಿ ನಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸುವುದಷ್ಟೇ ನಮ್ಮ ಗುರಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
ಹುಣಸೂರು ಬೈ ಎಲೆಕ್ಷನ್ ರಣಕಣ ಕಾವೇರಿದ್ದು ಇಂದು ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಬೃಹತ್ ಮೆರವಣಿಗೆ ಮೂಲಕ ಎಸಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಹುಣಸೂರಿಗೆ ಭರ್ಜರಿ ಎಂಟ್ರಿ ಪಡೆದ ಮಾಜಿ ಸಿಎಂ ಕುಮಾರಸ್ವಾಮಿಗೆ ಬೃಹತ್ ಸೇಬಿನ ಹಾರ ಹಾಕಿ ಅದ್ಧೂರಿ ಸ್ವಾಗತ ಕೋರಲಾಯಿತು. ಸಾಯಿಬಾಬಾ ದೇವಾಲಯ ಮುಂಭಾಗದಿಂದ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಜೊತೆ ತೆರೆದ ವಾಹನದಲ್ಲಿ ಹೆಚ್.ಡಿ ಕುಮಾರಸ್ವಾಮಿ ಬೃಹತ್ ಮೆರವಣಿಗೆ ನಡೆಸಿದರು.
ಮೆರವಣಿಗೆ ಮೂಲಕ ಎಸಿ ಕಚೇರಿಯತ್ತ ತೆರಳಿ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ನಾಮಪತ್ರ ಸಲ್ಲಿಕೆ ಮಾಡಿದರು. ೀ ವೇಳೆ ಮಾಜಿ ಸಿಎಂ ಹೆಚ್.ಡಿ ಕುಮಾರ್ಸ್ವಾಮಿ ಉಪಸ್ಥಿತರಿದ್ದು, ಶಾಸಕ ಸಾ.ರಾ ಮಹೇಶ್, ಕೆ.ಮಹದೇವು ಸಾಥ್ ನೀಡಿದರು.
ಬಳಿಕ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಯಾರು ಏನೇ ಹೇಳಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳೋದು ಮಾತ್ರ ನನ್ನ ಗುರಿ. ನಮ್ಮ ನಿಲುವು ಸ್ಪಷ್ಟವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಮಗೆ ಸಮಾನಾಂತರ ಎದುರಾಳಿಗಳು. ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂಬುದಷ್ಟೇ ನಮ್ಮ ಗುರಿ. ಯಾರನ್ನೋ ಸೋಲಿಸಲು ಅಥವಾ ಇನ್ಯಾರನ್ನೋ ಗೆಲ್ಲಿಸಲು ನಾವು ಸ್ಪರ್ಧೆ ಮಾಡುತ್ತಿಲ್ಲ. ಎಲ್ಲ 15 ಕ್ಷೇತ್ರಗಳಲ್ಲೂ ಪ್ರಬಲ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುತ್ತೇವೆ ಎಂದು ಸ್ಪಷ್ಟನೆ ನೀಡಿದರು.
ಶಿವಾಜಿ ನಗರ ಅನರ್ಹಶಾಸಕ, ಮಾಜಿ ಸಚಿವ ರೋಷನ್ ಬೇಗ ಜೆಡಿಎಸ್ ಸೇರ್ಪಡೆ ವದಂತಿ ವಿಚಾರ. ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಯಾರೂ ನನ್ನನ್ನ ಭೇಟಿ ಮಾಡಿಲ್ಲ. ಬೆಳಗಾವಿಯ ನಾಲ್ಕು ಸೇರಿದಂತೆ ಇನ್ನುಳಿದ ಕ್ಷೇತ್ರಗಳಿಗೆ ಸಂಜೆಯೊಳಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತೇವೆ ಎಂದು ಹೇಳಿದರು.
Key words: Former CM – Kumaraswamy – Hunsur – Welcome – JDS Candidate – Nomination